ಕಾಸರಗೋಡು: ಅಡೂರು ಸಮೀಪದ ಬೆಳ್ಳಿಚ್ಚೇರಿ ಗುಳಿಗ ಮೂಲೆಯಲ್ಲಿ ರಬ್ಬರ್ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ದುರ್ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕಿದಾಗ ಮೃತದೇಹ ಕಂಡು ಬಂದಿದೆ.

ವ್ಯಕ್ತಿಯೊಬ್ಬರ ಖಾಸಗಿ ಜಾಗದಲ್ಲಿರುವ ರಬ್ಬರ್ ತೋಟದಲ್ಲಿ ಮರದ ಕೊಂಬೆಗೆ ವ್ಯಕ್ತಿ ನೇಣು ಬಿಗಿದುಕೊಂಡಿದ್ದಾರೆ. ಲುಂಗಿಯಲ್ಲಿ ನೇಣು ಬಿಗಿದಿದ್ದು ಅರ್ದ ಭಾಗ ಕೊಳೆದು ಕೆಳಕ್ಕೆ ಬಿದ್ದಿದೆ. 6 ದಿನಗಳ ಹಿಂದೆ ಮೃತಪಟ್ಟಿರಬೇಕು ಎಂದು ಸಂಶಯಿಸಲಾಗಿದ್ದು, ರಬ್ಬರ್ ಟಾಪಿಂಗ್ ಕೆಲಕ್ಕೆಂದು ಬಂದಿದ್ದ ಪತ್ತನಂತಿಟ್ಟ ನಿವಾಸಿ ನಾಪತ್ತೆಯಾಗಿರುವುದಾಗಿಯೂ ತಿಳಿದು ಬಂದಿದೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.




