ಕೇರಳ ರಾಜ್ಯದ ಲಾಟರಿ ವಿರಾಜಪೇಟೆಯಲ್ಲಿ ಅಕ್ರಮ ಮಾರಾಟ; ಓರ್ವನ ಬಂಧನ

Share with

ವಿರಾಜಪೇಟೆ: ಅಂತರ್ ರಾಜ್ಯದಿಂದ ಅಕ್ರಮವಾಗಿ ಲಾಟರಿ ತಂದು ನಗರದಲ್ಲಿ ಮಾರಾಟ ಮಾಡುತಿದ್ದ ಕೇರಳ ರಾಜ್ಯದ ವ್ಯಕ್ತಿಯನ್ನು ವಿರಾಜಪೇಟೆ ನಗರದಲ್ಲಿ ಬಂಧಿಸಲಾಗಿದೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕೂತುಪರಂಬು ನಿವಾಸಿ ಲೇಟ್ ಬಾಲನ್ ಎಂಬುವವರ ಪುತ್ರ ಮೋಹನ್ ಕೆ (41) ಅಕ್ರಮವಾಗಿ ಲಾಟರಿ ಮಾರಾಟ ಮಾಡುತಿದ್ದ ವೇಳೆ ಬಂಧಿತನಾದ ವ್ಯಕ್ತಿ.

ವಿರಾಜಪೇಟೆ ಆರ್ಜಿ ಗ್ರಾಮದ ಪೆರುಂಬಾಡಿ ಗ್ರಾಮದಲ್ಲಿ ಆಕ್ರಮವಾಗಿ ಲಾಟರಿ ಮಾರಾಟ ಮಾಡುತಿದ್ದ ಎಂಬುದಾಗಿ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿರಾಜಪೇಟೆ ನಗರ ಠಾಣೆಯ ಪೊಲೀಸ್‌ ಸಿಬ್ಬಂದಿಗಳು ದಾಳಿ ನಡೆಸಿ, ವ್ಯಕ್ತಿಯಿಂದ ೧೨, ಮೂಲ ಟಿಕೆಟ್, 50 ರೂ ಮುಖಬೆಲೆಯ 35 ಬಂಡಲ್ ಲಾಟರಿ ಟಿಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. 21,000 ರೂ ಮೌಲ್ಯ ಎಂದು ಅಂದಾಜಿಸಲಾಗಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಕೆ. ಮೋಹನ್ ಮೇಲೆ ಕರ್ನಾಟಕ ರಾಜ್ಯ ಲಾಟರಿ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು, ವಿರಾಜಪೇಟೆ ಉಪ ವಿಭಾಗ ಡಿ.ವೈ.ಎಸ್ಪಿ, ಮಾರ್ಗದರ್ಶನದಡಿಯಲ್ಲಿ, ವಿರಾಜಪೇಟೆ ವೃತ್ತ ನಿರೀಕ್ಷಕರು, ನಗರ ಠಾಣೆಯ ಠಾಣಾಧಿಕಾರಿ,ಎ.ಎಸ್.ಐ. ಮಂಜುನಾಥ್, ಅಪರಾಧ ದಳ ಸಿಬ್ಬಂದಿಗಳಾದ ಧರ್ಮ ಮತ್ತು ಶೇಖ‌ರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


Share with

Leave a Reply

Your email address will not be published. Required fields are marked *