ಕೇರಳದಲ್ಲಿ ಭಾರೀ ಮಳೆ: 5 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ

Share with

ತಿರುವನಂತಪುರ: ಕೇರಳದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿದಿದ್ದು, ರಾಜ್ಯದ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಶನಿವಾರ ‘ಆರೆಂಜ್ ಅಲರ್ಟ್’ ಘೋಷಿಸಿತ್ತು.

ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ.

ಈಗಾಗಲೇ ವಯನಾಡ್ ಜಿಲ್ಲೆಯ ಬಾಣಸುರ ಸಾಗರ್ ಮತ್ತು ಪಟ್ಟಣಂತಿಟ್ಟ ಜಿಲ್ಲೆಯ ಮುಯಿಯಾರ್ ಅಣೆಕಟ್ಟಿನ ಗೇಟಗಳನ್ನು ತೆರೆಯಲಾಗಿದೆ. ಮಲಂಪುಳ ಸೇರಿದಂತೆ ಇನ್ನೂ ಹಲವಾರು ಅಣೆಕಟ್ಟುಗಳನ್ನು ಶನಿವಾರ ತೆರೆಯಲಾಗಿದೆ.

ನೀರಿನ ಮಟ್ಟ 136 ಅಡಿಗ ಏರಿಕೆಯಾದರೆ ಮುಲ್ಲಪೆರಿಯರ್ ಅಣೆಕಟ್ಟಿನಿಂದ ನೀರನ್ನು ಹೊರಬಿಡುವುದಾಗಿ ತಮಿಳುನಾಡಿನ ಅಧಿಕಾರಿಗಳು ಸೂಚಿಸಿರುವುದರಿಂದ ಕೇರಳದ ತಗ್ಗುಪ್ರದೇಶಗಳಲ್ಲಿನ 883 ಕುಟುಂಬಗಳ 3,220 ಜನರ ಸ್ಥಳಾಂತರಕ್ಕೆ ಸಿದ್ಧತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *