BHEL ಅಲ್ಲಿ 500ಕ್ಕೂ ಅಧಿಕ ಉದ್ಯೋಗಗಳು.. 10th, ಐಟಿಐ ಪಾಸ್ ಆಗಿದ್ರೆ ಸಾಕು..!! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Share with

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ (ಬಿಹೆಚ್​ಇಎಲ್)ಗೆ ಹೊಸ ಉದ್ಯೋಗಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಉದ್ಯೋಗಗಳಿಗೆ ಆನ್​​ಲೈಲ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಇರುವ ಸಂಸ್ಥೆಯ ಇಲಾಖೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ.

ಬಿಹೆಚ್​ಇಎಲ್ ಗ್ರೇಡ್​-4 ವಿಭಾಗದ ಉದ್ಯೋಗಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ ಈಗಾಗಲೇ ನೋಟಿಫಿಕೇಶನ್ ಅನ್ನು ಬಿಹೆಚ್​ಇಎಲ್ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಹುದ್ದೆಯ ಜೊತೆಗೆ ಉತ್ತಮ ಮಟ್ಟದ ಮಾಸಿಕ ವೇತನ ಶ್ರೇಣಿ ಕೂಡ ಇದೆ.

ಒಟ್ಟು ಉದ್ಯೋಗಗಳು:

515 ಉದ್ಯೋಗಗಳು

ಉದ್ಯೋಗದ ಹೆಸರು- Artisans Grade- IV (ಕುಶಲಕರ್ಮಿಗಳು)

ಕೆಲಸ ಮಾಡುವ ಸ್ಥಳ:

ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ

ಮಾಸಿಕ ವೇತನ ಶ್ರೇಣಿ– 29,500 ಇಂದ 65,000 ರೂಪಾಯಿಗಳು

ಶೈಕ್ಷಣಿಕ ವಿದ್ಯಾರ್ಹತೆ
SSLC, ITI

ವಯಸ್ಸಿನ ಮಿತಿ ಎಷ್ಟು?
32 ವರ್ಷದ ಒಳಗಿನ ಅಭ್ಯರ್ಥಿಗಳು

ಅರ್ಜಿ ಶುಲ್ಕ ಎಷ್ಟು?

ಎಸ್​ಸಿ, ಎಸ್​​ಟಿ ಮಾಜಿ ಸೈನಿಕರು- 472 ರೂಪಾಯಿ
ಯುಆರ್, ಇಡಬ್ಲುಎಸ್​, ಒಬಿಸಿ- 1,072 ರೂಪಾಯಿ
ಆನ್​ಲೈನ್ ಮೂಲಕ ಹಣ ಪಾವತಿಸಬೇಕು


ಆಯ್ಕೆ ಪ್ರಕ್ರಿಯೆ ಹೇಗೆ?

ಕಂಪ್ಯೂಟರ್ ಬೇಸಡ್ ಟೆಸ್ಟ್
ಸ್ಕಿಲ್ ಟೆಸ್ಟ್​
ದಾಖಲಾತಿ ಪರಿಶೀಲನೆ
ಸಂದರ್ಶನ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ- 16 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 12 ಆಗಸ್ಟ್ 2025


Share with

Leave a Reply

Your email address will not be published. Required fields are marked *