ಕೆಂಪುಕಲ್ಲು, ಮರಳು ಕೊರತೆ..;ಕಾರ್ಮಿಕರಿಂದ ಪ್ರತಿಭಟನೆ

Share with

ಮಂಗಳೂರು: ಕೆಂಪುಕಲ್ಲು ಮತ್ತು ಮರಳು ಕೊರತೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ಸಿಐಟಿಯು ಎಐಟಿಯುಸಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ ನಡೆಯಿತು.

ಅಂಬೇಡ್ಕ‌ರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನಾ ಮೆರವಣಿಗೆ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾಡಳಿತ, ಸರಕಾರ, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಕಾರ್ಮಿಕರು ಆಕ್ರೋಶ ಹೊರಹಾಕಿದ್ದು, ಕಾರ್ಮಿಕರಿಗೆ ಕೆಲಸ ಇಲ್ಲದೆ ಸಮಸ್ಯೆಯಾಗಿದ್ದು ಅವರಿಗೆ ಪರಿಹಾರ ನೀಡಬೇಕು, ಕಲ್ಲು ಮರಳು ಪೂರೈಕೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಯಾದವ ಶೆಟ್ಟಿ, ವಸಂತ ಆಚಾರಿ, ಕರುಣಾಕರ್, ರವುಚಂದ್ರ, ಜನಾರ್ದನ ಕುತ್ತಾರ್, ಯೋಗೀಶ್ ಜಪ್ಲಪಿನ ಮೊಗರು, ಕೇಶವ ಬಂಗೇರ ಮೊದಲಾದವರು ಭಾಗಿಯಾಗಿದ್ದರು.


Share with

Leave a Reply

Your email address will not be published. Required fields are marked *