ಬೆಂಗಳೂರು: ನಮ್ಮ ಸಾರಥಿ ಟ್ರಸ್ಟ್ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಂಗಳಮುಖಿಯರಿಗಾಗಿ ಪಿಂಕ್ ಆಟೋ ರಿಕ್ಷಾಗಳ ಸಮೂಹವಾದ ನಮ್ಮ ಸಾರಥಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನಮ್ಮ ಸಾರಥಿ ಟ್ರಸ್ಟ್ನ ಅಧ್ಯಕ್ಷ ಸಿ.ಸಂಪತ್ ಮಾತನಾಡಿ, ನಮ್ಮ ಸಾರಥಿ ಯೋಜನೆಯು ಮಹಿಳೆ ಯರು ಮತ್ತು ಮಂಗಳಮುಖಿಯರ ವೃತ್ತಿಪರ ಆಟೋ- ರಿಕ್ಷಾ ಚಾಲಕರಾಗಲು ತರಬೇತಿ, ಪರವಾಗಿ ಮತ್ತು ಬೆಂಬಲ ನೀಡುವ ಮೂಲಕ ಪ್ರೋ ತ್ಸಾಹ ನೀಡಲಿದೆ. ಈ ಯೋಜನೆಯಿಂದ 2026ರ ಮಾರ್ಚ್ ವೇಳೆಗೆ 1,000 ಚಾಲಕರು ಮತ್ತು 2030ರ ವೇಳೆಗೆ 10 ಸಾವಿರ ಚಾಲಕರನ್ನು ಮಾಡುವ ಗುರಿ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ 5 ತರಬೇತಿ ಕೇಂದ್ರ ಗಳನ್ನು ಸ್ಥಾಪಿಸಲಾಗುವುದು, ಚಾಲನಾ ಕೌಶಲ್ಯ, ಸಂಚಾರ ನಿಯಮಗಳು, ವಾಹನ ನಿರ್ವಹಣೆ, ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ, ಗ್ರಾಹಕ ಸೇವೆ ಮತ್ತು ಸ್ವರಕ್ಷಣೆಗಳನ್ನು ಒಳಗೊಂಡ 3 ತಿಂಗಳ ರಚನಾತ್ಮಕ ಕಾರ್ಯಕ್ರಮ ನೀಡುತ್ತವೆ. ಆರ್ಟಿಒ, ಹಣಕಾಸು ಸಂಸ್ಥೆಗಳ ಸಹಭಾಗಿತ್ವದಲ್ಲಿ ಟ್ರಸ್ಟ್ ಚಾಲನಾ ಪರವಾನಗಿ ವಿತರಣೆ, ವಾಹನ ಸಾಲ ಪಡೆಯಲು ಸಹಾಯ ಮಾಡಲಿದೆ ಎಂದರು. ಈ ಯೋಜನೆಯ ಮೂಲಕ ನಮ್ಮ ಸಾರಥಿ ಮಹಿಳೆಯರಿಗೆ ತಿಂಗಳಿಗೆ 15 ರಿಂದ 25 ಸಾವಿರ ರೂ.ವರೆಗಿನ ಹೊಸ ಆದಾ ಯದ ಮೂಲಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದರು. ನಮ್ಮ ಸಾರಥಿ ಟ್ರಸ್ಟ್ನ ಉಪಾಧ್ಯಕ್ಷ ರುದ್ರಮೂರ್ತಿ, ಪ್ರಧಾನ ಕಾರ್ಯದರ್ಶಿ ಕಾದ್ರಿ, ಜಂಟಿ ಕಾರ್ಯದರ್ಶಿ ಮೀನಾಕ್ಷಿ ಇದ್ದರು.




