ಚೆನ್ನೈ: ಟಿವಿಕೆ ಸಂಸ್ಥಾಪಕ ನಟ ವಿಜಯ್ ಅವರ ಕರೂರ ಱಲಿಯಲ್ಲಿ ನಡೆಸ ಕಾಲ್ತುಳಿತ ದುರಂತ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ತಲ್ಲಣವನ್ನೇ ಸೃಷ್ಟಿಸಿದೆ. ಕಾಲ್ತುಳಿತದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ.

ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಚಾರದ ಭಾಗವಾಗಿ ಸೆಪ್ಟೆಂಬರ್ 13ರಿಂದ ಪ್ರತಿ ಶನಿವಾರ ಜನಸಂಪರ್ಕ ಱಲಿ ಆರಂಭಿಸಿದ್ದರು. ಈಗಾಗಲೇ ಎರಡು ರ್ಯಾಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ವು ಪ್ರತಿ ರ್ಯಾಲಿಯಲ್ಲಿ ಲಕ್ಷಾಂತರ ಜನ ಭಾಗಿಯಾಗಿ ವಿಜಯ್ಗೆ ಬೆಂಬಲ ಸೂಚಿಸಿದ್ದರು.
ತಮಿಳುನಾಡಿನ ಕರೂರಿನಲ್ಲಿ ಸೆ.27ರಂದು ನಡೆದ ನಟ-ರಾಜಕಾರಣಿ ವಿಜಯ್ ದಳಪತಿ ರ್ಯಾಲಿಯಲ್ಲಿ ಉಂಟಾದ ಕಾಲ್ತುಳಿತಕ್ಕೆ 39 ಮಂದಿ ಬಲಿಯಾಗಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದುರಂತಕ್ಕೆ ಕಾರಣವೇನು?
- ಕಾರ್ಯಕ್ರಮದಲ್ಲಿ ಕೇವಲ 10,000 ಜನರಿಗೆ ಮಾತ್ರ ಅವಕಾಶ
- ನಟ ವಿಜಯ್ ರ್ಯಾಲಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಭಾಗಿ
- ಸೀಮಿತ ಪ್ರದೇಶ ಕಿರಿದಾಗಿರೋ ಕಾರಣಕ್ಕೆ ಉಸಿರುಗಟ್ಟಿ ಸಾವು
- ಬೆಳಗ್ಗೆಯೇ ರ ್ಯಾಲಿಯನ್ನು ನಡೆಯಲು ಸಮಯ ನಿಗದಿಯಾಗಿತ್ತು
- ಸುಮಾರು ಆರು ಗಂಟೆ ತಡವಾಗಿ ರ್ಯಾಲಿಗೆ ಆಗಮಿಸಿದ ವಿಜಯ್
- ಹೆಚ್ಚಿನ ಜನ ಸೇರಿದ್ದು, ನಿಯಂತ್ರಿಸಲು ಪೋಲಿಸರಿಗೂ ಆಗಲಿಲ್ಲ
- ಜನದಟ್ಟನೆಯಿಂದ ಉಸಿರಾಟ ಸಮಸ್ಯೆಯಾಗಿ ಮೂರ್ಚೆ ಹೋದರು
- ಪುಟ್ಟ ಮಕ್ಕಳು ತಮ್ಮ ತಮ್ಮ ಕುಟುಂಬಸ್ಥರಿಂದ ದೂರ ಸರಿದರು
- ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಕಾಲ್ತುಳಿತ ಸಂಭವಿಸಿ 39 ಜನ ಮೃತ
- ಈ ದುರಂತಕ್ಕೆ ಆಯೋಜಕರೆ ಕಾರಣ, ವಿಜಯ್ ಬಂಧನಕ್ಕೆ ಆಗ್ರಹ
ರಾಜ್ಯ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಕರೂರಿಗೆ ಧಾವಿಸಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೂರ್ ಜಿಲ್ಲಾ ಕಾರ್ಯದರ್ಶಿ ವಿ. ಸೆಂಥಿಲ್ಬಾಲಾಜಿ ಅವರಿಗೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.




