ಮಂಗಳೂರು: ಹಲವು ವಾಹನಗಳಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ; ಸರಣಿ ಅಪಘಾತದಲ್ಲಿ ಮೂವರು ಸಾವು

Share with

ಮಂಗಳೂರು: ಮಂಗಳೂರಿನ ಹೊರವಲಯದ ಪಣಂಬೂರು ಜಂಕ್ಷನ್ ಬಳಿ ಶನಿವಾರ ಎರಡು ಟ್ಯಾಂಕರ್‌ಗಳು, ಒಂದು ಆಟೋರಿಕ್ಷಾ ಮತ್ತು ಒಂದು ಎಸ್‌ಯುವಿ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪಣಂಬೂರು ಜಂಕ್ಷನ್‌ನಲ್ಲಿ ಹಸುವೊಂದು ಇದ್ದಕ್ಕಿದ್ದಂತೆ ರಸ್ತೆ ದಾಟಲು ಪ್ರಯತ್ನಿಸಿದಾಗ, ಮೂಲ್ಕಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ.

ಆ ಟ್ಯಾಂಕರ್ ಅನ್ನು ಹಿಂಬಾಲಿಸಿದ ಆಟೋರಿಕ್ಷಾ ಸಕಾಲದಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಅದರ ಹಿಂದೆ ಬರುತ್ತಿದ್ದ ಎಸ್‌ಯುವಿ ಕಾರು ಸಹ ಹಾಗೆಯೇ ನಿಂತಿತು. ಆದರೆ ಅತಿ ವೇಗದಲ್ಲಿ ಹಿಂಭಾಗದಿಂದ ಬರುತ್ತಿದ್ದ ಮತ್ತೊಂದು ಟ್ಯಾಂಕರ್ ಬ್ರೇಕ್ ಹಾಕಲು ವಿಫಲವಾಗಿ ನೇರವಾಗಿ ಎಸ್‌ಯುವಿ ಕಾರು ಹಾಗೂ ಆಟೋಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *