Kasaragod: ಮನೆ ಕಳ್ಳತನ ಲೈವ್ ವಾಗಿ ವೀಕ್ಷಣೆ ಮಾಡಿದ ಮನೆ ಮಾಲೀಕ..!

Share with

ಕಾಸರಗೋಡು: ಉದುಮ ಮಾಂಗಾಡ್‌ನಲ್ಲಿ ಅಲೆಮಾರಿಗಳು ಶನಿವಾರ ಹಗಲು ವೇಳೆಯಲ್ಲಿಯೇ ಯಾರೂ ಇಲ್ಲದ ಒಂದು ಮನೆಯ ಆವರಣದ ಒಳಗೆ ಪ್ರವೇಶಿಸಿ ಕಳ್ಳತನ ನಡೆಸಿದ್ದಾರೆ. ಮನೆ ಮಾಲಕ ದುಬೈಯಲ್ಲಿ ಕುಳಿತುಕೊಂಡು ಊರಿನಲ್ಲಿರುವ ತನ್ನ ಮನೆಯಲ್ಲಿ ನಡೆದ ಕಳ್ಳತನದ ಲೈವ್ ವೀಕ್ಷಿಸಿದ್ದಾರೆ.

ಈ ಸಂದರ್ಭ ಮನೆಮಂದಿ ಎಲ್ಲರೂ ಹೊರಗೆ ತೆರಳಿದ್ದರು. ಮನೆ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೂ ಇರಲಿಲ್ಲ. ಮನೆಗೆ ಹೊಸ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಿರುವ ಹಿನ್ನೆಲೆಯಲ್ಲಿ ಹಳೆಯ ಯಂತ್ರದ ಭಾಗಗಳನ್ನು ಅಂಗಳದಲ್ಲಿ ಇಡಲಾಗಿತ್ತು. ಮನೆಯಲ್ಲಿ ಜನರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಅಲೆಮಾರಿಗಳು ಗೇಟ್ ತೆಗೆದು ಒಳಗೆ ಆಗಮಿಸಿ ಆ ಯಂತ್ರದ ಭಾಗಗಳನ್ನು ಕದ್ದೊಯ್ದಿದ್ದಾರೆ.


Share with

Leave a Reply

Your email address will not be published. Required fields are marked *