ಶಾಲಾ ಮಕ್ಕಳಿಗೆ ಪಠ್ಯದ ಮೂಲಕ ಭಗವದ್ಗೀತೆ ಬೋಧಿಸಲು ಕೇಂದ್ರ ಸಚಿವ HD.ಕುಮಾರಸ್ವಾಮಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ಗೆ ಪತ್ರ ಬರೆದಿದ್ದಾರೆ. ‘ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಭಗವದ್ಗೀತೆ ಬೋಧನೆ ಅತ್ಯಗತ್ಯವಾಗಿದೆ.

ಕಾಲಾತೀತ ಮೌಲ್ಯಗಳು, ನೈತಿಕ ಶಕ್ತಿಯು NEP ಅಡಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಉತ್ಕೃಷ್ಟಗೊಳಿಸುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪ್ರಜೆಗಳಾಗಿ, ಜಾಗತಿಕವಾಗಿ ಶ್ರೇಷ್ಠರಾಗಲು ಇದು ಪ್ರೇರಣೆ ನೀಡುತ್ತದೆ’ ಎಂದಿದ್ದಾರೆ.




