2025ನೇ ’ವರ್ಷದ ಸಾಧಕರು’ ಪ್ರಶಸ್ತಿಗೆ ಅರ್ಜಿ ಆಹ್ವಾನ

Share with

ಮಂಗಳೂರು: ಮಂಗಳೂರು ಪ್ರೆಸ್‌ಕ್ಲಬ್‌ನಿಂದ ದ.ಕ.ಜಿಲ್ಲೆಯ ಸಾಧಕರಿಗೆ ನೀಡಲಾಗುವ ಮಂಗಳೂರು ಪ್ರೆಸ್‌ಕ್ಲಬ್ ನ 2025ನೇ ಸಾಲಿನ ವರ್ಷದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾಜಿಕ ಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅಪರೂಪದ, ಅನುಪಮ ಸಾಧನೆಗೈದ ದ.ಕ. ಜಿಲ್ಲೆಯ ಸಾಧಕರನ್ನು ಮಂಗಳೂರು ಪ್ರೆಸ್‌ಕ್ಲಬ್‌ ಪ್ರಶಸ್ತಿಗೆ ಶಿಫಾರಸು ಮಾಡಬಹುದಾಗಿದೆ. ಈವರೆಗೂ ಪ್ರಶಸ್ತಿ ಪಡೆಯದ ಎಲೆಮರೆಯ ಕಾಯಿಯಂತಿರುವ ಹಿರಿಯ ಸಾಧಕರಿಗೆ ಆದ್ಯತೆ ನೀಡಲಾಗುವುದು.

ಶಿಫಾರಸಿನಲ್ಲಿ ಸಾಧಕರ ಹೆಸರು, ಫೋಟೋ, ವಿಳಾಸ, ವೃತ್ತಿ, ವಯಸ್ಸು ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿಗಳಿರಬೇಕು. ಶಿಫಾರಸು ಪತ್ರದೊಂದಿಗೆ ಸಾಧಕರ ಸಾಧನೆಯ ಬಗ್ಗೆ 200 ಶಬ್ದಗಳಿಗೆ ಮೀರದಂತೆ ಪರಿಚಯ ಹಾಗೂ ಸಂಪೂರ್ಣ ಮಾಹಿತಿಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ 2025ರ ಡಿ.31ರೊಳಗೆ ಪ್ರಧಾನ ಕಾರ್ಯದರ್ಶಿ, ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನ ಕಟ್ಟಡ, ಉರ್ವ ಮಾರ್ಕೆಟ್ ರಸ್ತೆ, ಮಂಗಳೂರು-6 ಈ ವಿಳಾಸಕ್ಕೆ ಕಳುಹಿಸಬೇಕು.

ಒಬ್ಬರಿಗೆ ಇಬ್ಬರು ಸಾಧಕರನ್ನು ಶಿಫಾರಸು ಮಾಡುವ ಅವಕಾಶ ಇದೆ. ತಜ್ಞರ ಸಮಿತಿಯು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾನವಿದೆ. ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಪ್ರೆಸ್‌ಕ್ಲಬ್‌ ದಿನಾಚರಣೆ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಪ್ರೆಸ್‌ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *