ರಾಜ್ಯದಲ್ಲಿ ರೇಷನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ BPL (Below Poverty Line) ರೇಷನ್ ವಿತರಣೆ ಮಾಡಲಾಗುತ್ತದೆ. ಆದ್ರೆ ಉಳ್ಳವರು, ಸಿರಿವಂತರ ಹೆಸರಲ್ಲೂ ಬಿಪಿಎಲ್ ಕಾರ್ಡ್ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಆಹಾರ ಇಲಾಖೆ ಅಕ್ರಮ ಕಾರ್ಡ್ದಾರರಿಗೆ ಬ್ರೇಕ್ ಹಾಕಿದೆ. 4 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ಗಳು ಎಪಿಎಲ್ಗೆ ವರ್ಗಾವಣೆಗೊಂಡಿದೆ.

BPL ಕಾರ್ಡ್ದಾರರಿಗೆ ಬಿಗ್ ಶಾಕ್
ಅಕ್ರಮ ಬಿಪಿಎಲ್ ಕಾರ್ಡ್ದಾರರ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ ತೀವ್ರಗೊಂಡಿದೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರನ್ನ ಪತ್ತೆ ಮಾಡಿ ಪಡಿತರ ಚೀಟಿ ರದ್ದು ಗೊಳಿಸುವಂತೆ ಸರ್ಕಾರ ಖಡಕ್ ಆದೇಶ ನೀಡಿತ್ತು. ಅದರಂತೆ ಕಾರ್ಯಾಚರಣೆ ಇಳಿದ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
BPL ನಿಂದ APLಗೆ 4 ಲಕ್ಷಕ್ಕೂ ಅಧಿಕ ಕಾರ್ಡ್ ವರ್ಗಾವಣೆ
ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 15,056 ಬಿಪಿಎಲ್ ಕಾರ್ಡ್ ಗಳು ರದ್ದುಗೊಳಿಸಲಾಗಿದೆ. ಇನ್ನು 4 ಲಕ್ಷಕ್ಕೂ ಅಧಿಕ ಕಾರ್ಡ್ಗಳು ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆಗೊಂಡಿದೆ. ಜೊತೆಗೆ 5,632 ಬಿಪಿಎಲ್ ಕಾರ್ಡ್ಗಳ ವಿಚಾರಣೆ ಕಾಯ್ದಿರಿಸಿ ತಾತ್ಕಾಲಿಕ ಅಮಾನತು ಮಾಡಲಾಗಿದೆ.
14 ಲಕ್ಷ ಅಕ್ರಮ ಫಲಾನುಭವಿಗಳಿಗೆ ಶಾಕ್
ಮತ್ತೊಂದೆಡೆ ಬರೋಬ್ಬರಿ 3.90 ಲಕ್ಷ ಬಿಪಿಎಲ್ ಕಾರ್ಡ್ಗಳು ಎಪಿಎಲ್ ಕಾರ್ಡ್ ಗಳಾಗಿ ಬದಲಾವಣೆಗೊಂಡಿದೆ. ಒಟ್ಟು 4.10 ಲಕ್ಷ ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಇಲಾಖೆ ಬಿಸಿ ಮುಟ್ಟಿಸಿದೆ. ಈ ಮೂಲಕ 14 ಲಕ್ಷ ಅಕ್ರಮ ಫಲಾನುಭವಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಾಕ್ ನೀಡಿದೆ.
03/09/2025 – 14/12/2025 ವರೆಗಿನ ಆಹಾರ ಇಲಾಖೆಯ ಕಾರ್ಯಾಚರಣೆಯ ಅಂಕಿ ಅಂಶದ ಪ್ರಕಾರ ಸದ್ಯ ರಾಜ್ಯದಲ್ಲಿರುವ ಒಟ್ಟು ರೇಷನ್ ಕಾರ್ಡ್ ಗಳ ಸಂಖ್ಯೆ 1,53,65,889 ಇದೆ. ಸದ್ಯ 1,13,56,089 ಬಿಪಿಎಲ್ ಕಾರ್ಡ್ಗಳು ಚಾಲ್ತಿಯಲ್ಲಿದ್ದು, ಸದ್ಯ ಚಾಲ್ತಿಯಲ್ಲಿರುವ ಅಂತ್ಯೋದಯ ಕಾರ್ಡ್ ಗಳ ಸಂಖ್ಯೆ 42,94,924 ಇದೆ.




