“ಅಮ್ಮಾ ನನಗಾಗಿ ಹಣ ವ್ಯರ್ಥ ಮಾಡಬೇಡಿ..” ಪತ್ರ ಬರೆದಿಟ್ಟು ಜೀವ ಕಳೆದುಕೊಂಡ ವಿದ್ಯಾರ್ಥಿ

Share with

ನೋಯ್ಡಾ: “ನನ್ನ ಶಿಕ್ಷಣಕ್ಕಾಗಿ ಇನ್ನು ಮುಂದೆ ಹಣ ವ್ಯರ್ಥ ಮಾಡಬೇಡಿ, ನಾನು ಕಲಿಕೆಯಲ್ಲಿ ಸೋಲನ್ನು ಒಪ್ಪಿಕೊಳ್ಳುತ್ತಿದ್ದೇನೆ” ಎಂದು ಡೆತ್ ನೋಟ್ ಬರೆದಿಟ್ಟು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟ‌ರ್ ನೋಯ್ದಾದಲ್ಲಿ ಮಂಗಳವಾರ(ಡಿ.23) ನಡೆದಿದೆ.

ಬಿಹಾರ ಮೂಲದ ಆಕಾಶ್ ದೀಪ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.

ಆಕಾಶ್ ದೀಪ್ ದೆಹಲಿ ಟೆಕ್ನಿಕಲ್‌ ಕ್ಯಾಂಪಸ್‌ನಲ್ಲಿ (DTC) ಪ್ರಥಮ ವರ್ಷದ ಬಿಟೆಕ್ (ಕಂಪ್ಯೂಟರ್ ಸೈನ್ಸ್) ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಹಾಸ್ಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಅದರಂತೆ ಮಂಗಳವಾರ ಸಂಜೆ ಸಹಪಾಠಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆಕಾಶ್ ಹಾಸ್ಟೆಲ್ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾನೆ ಬಳಿಕ ಕೆಲ ಹೊತ್ತಿನ ಬಳಿಕ ಹೊರಹೋಗಿದ್ದ ಸಹಪಾಠಿ ಹಾಸ್ಟೆಲ್ ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಕೂಡಲೇ ಆಕಾಶ್ ದೀಪ್ ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಪರಿಶೀಲಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಕೊಠಡಿಯಲ್ಲಿ ಡೆತ್ ನೋಟ್ ಪತ್ತೆ:

ವಿಚಾರ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಅದರಲ್ಲಿ ‘ಕ್ಷಮಿಸಿ ಅಮ್ಮ-ಅಪ್ಪ, ನಿಮ್ಮ ಮಗ ದುರ್ಬಲನಾದ. ಯಾರೊಬ್ಬರ ಒತ್ತಾಯದಿಂದ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ. ದಯವಿಟ್ಟು ಈ ವಿಷಯದಲ್ಲಿ ಯಾರನ್ನೂ ತೊಂದರೆಗೆ ಸಿಲುಕಿಸಬೇಡಿ.” ಇಷ್ಟು ವರ್ಷ ನಿಮ್ಮ ಹಣವನ್ನು ನಾನು ಕಲಿಯುವ ಹೆಸರಿನಲ್ಲಿ ವ್ಯರ್ಥ ಮಾಡಿದ್ದೇನೆ ಆದರೆ ಇನ್ನು ಮುಂದೆ ಹಾಗೆ ಆಗುವುದಿಲ್ಲ, ನಾನು ಸೋತುಹೋಗಿದ್ದೇನೆ ನನ್ನಿಂದ ಕಲಿಯಲು ಸಾಧ್ಯವಿಲ್ಲ ಅಲ್ಲದೆ ನಾಲ್ಕು ವರ್ಷ ನಿಮ್ಮ ಹಣವನ್ನು ವ್ಯರ್ಥಮಾಡಲು ಬಿಡುವುದಿಲ್ಲ ಹಾಗಾಗಿ ನಾನು ದೂರ ಹೋಗುತ್ತಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *