ಬೆಂಗಳೂರು: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸೆಲೆಬ್ರಿಟಿಗಳ ಅಭಿಮಾನಿಗಳ ಹೆಸರಿನಲ್ಲಿ ಇಂತಹ ಕೃತ್ಯ ನಡೆಯುತ್ತಿರುವುದು ಬೇಸರದ ವಿಷಯ.

ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್ ಫ್ಯಾನ್ಸ್ ವಾರ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ವಾರ್ ನಡೆಯುತ್ತಿದೆ. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಅಭಿಮಾನಿಗಳ ಮೇಲೆ ಆರೋಪ – ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳು ಕಲಾವಿದರ ಕುಟುಂಬದವರನ್ನು ಎಳೆದು ತರುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕೆಲವರು ನಿಂದನೀಯ ಕಮೆಂಟ್‌ಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ಕೆಲವರು ಸುದೀಪ್ ಅವರ ಮಗಳು ಪುತ್ರಿ ಸಾನ್ವಿ (Sanvi Sudeep) ವಿರುದ್ಧವೂ ಕೆಲವರು ಅಸಭು ರೀತಿಯ ಕಮೆಂಟ್ ಮಾಡಿದ್ದರು.
ಈ ಬಗ್ಗೆ ಸುದೀಪ್ ಅವರು, ‘ಕೆಟ್ಟದಾಗಿ ಕಮೆಂಟ್ ಮಾಡುವವರು ವೇಸ್ಟ್ ನನ್ನ ಮಕ್ಕಳು’ ಎಂದು ಹೇಳಿದ್ದರು. ಇದೀಗ ಸುದೀಪ್ ಪುತ್ರಿಯೂ ಟ್ರೋಲ್ ಮಾಡುವವರ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.
ಇನ್ಸಾಗ್ರಾಮ್‌ನಲ್ಲಿ ಸಾನ್ವಿ ಅವರು ಸ್ಟೋರಿ ಹಾಕಿಕೊಂಡಿದ್ದಾರೆ. ‘ನನ್ನ ದೇಹವು ಚರ್ಚೆಯ ವಿಷಯವಲ್ಲ. ನಿಮ್ಮ ಅಭಿಪ್ರಾಯ ಬೇಕಾದರೇ ನಾನು ಕೇಳುತ್ತೇನೆ’ ಎಂದು ತಿರುಗೇಟು ಕೊಟ್ಟಿದ್ದಾರೆ.

ಆ ಮೂಲಕ ಟ್ರೋಲ್ ಮಾಡುತ್ತಿರುವ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ನನ್ನ ಮಗಳು ಸರ್, ಅವಳು ಏನು ಅಂತಾ ನನಗೆ ಗೊತ್ತು. ನನ್ನ ಮಗಳು ನನಗಿಂತ ತುಂಬಾ ಎತ್ತರಕ್ಕೆ ಬೆಳಿತಾಳೆ ಎಂದು ‘ಬಾದ್ ಷಾ’ ಸುದೀಪ್ ಇತ್ತೀಚೆಗೆ ಕಮೆಂಟ್ ಮಾಡುವವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದರು.




