ವಡೋದರಾದಲ್ಲಿ ಟಾಸ್ ಸೋತ ಆರ್ಸಿಬಿ; ಪ್ಲೇಯಿಂಗ್ 11 ಹೀಗಿದೆ

Share with

ಮಹಿಳಾ ಪ್ರೀಮಿಯರ್ ಲೀಗ್ನ ( Women’s Premier League) 4ನೇ ಆವೃತ್ತಿಯ 2ನೇ ಹಂತ ಇಂದಿನಿಂದ ವಡೋದರಾದಲ್ಲಿ ಆರಂಭವಾಗುತ್ತಿದೆ. ಮೊದಲ ಹಂತದ 11 ಪಂದ್ಯಗಳು ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದವು. ಈ ಮೈದಾನದಲ್ಲಿ 4 ಪಂದ್ಯಗಳನ್ನು ಆಡಿದ್ದ ಆರ್ಸಿಬಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ ಐದನೇ ಪಂದ್ಯವನ್ನು ವಡೋದರಾದಲ್ಲಿ ಆಡುತ್ತಿದೆ. ಆರ್ಸಿಬಿಗೆ ಇಂದಿನ ಎದುರಾಳಿ ಬಲಿಷ್ಠ ಗುಜರಾತ್ ಜೈಂಟ್ಸ್ (RCB vs Gujarat Giants). ಈ ತಂಡದಲ್ಲಿ ಆರ್ಸಿಬಿಯ 4 ಮಾಜಿ ಆಟಗಾರ್ತಿಯರಿದ್ದು, ಇದೀಗ ಅವರ ವಿರುದ್ಧ ಆರ್ಸಿಬಿ ತಂಡ ಸೆಣಸಬೇಕಿದೆ. ಆರ್ಸಿಬಿ ಇದುವರೆಗೆ ಈ ಆವೃತ್ತಿಯಲ್ಲಿ ಅಜೇಯ ತಂಡವಾಗಿ ಉಳಿದಿದ್ದು, ಇದೀಗ ತನ್ನ ಐದನೇ ಪಂದ್ಯವನ್ನು ಗೆದ್ದು ತನ್ನ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ. ಇತ್ತ ಗುಜರಾತ್ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಟಾಸ್ ಗೆದ್ದ ಗುಜರಾತ್
ಮೇಲೆ ಹೇಳಿದಂತೆ ಈ ಆವೃತ್ತಿಯ 12ನೇ ಪಂದ್ಯ ವಡೋದರಾದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಮೈದಾನದಲ್ಲೂ ಇಬ್ಬನಿ ಪ್ರಮುಖ ಪಾತ್ರವಹಿಸುವುದರಿಂದ ಗುಜರಾತ್ ಈ ನಿರ್ಧಾರ ತೆಗೆದುಕೊಂಡಿದೆ. ಇತ್ತ ಟಾಸ್ ಸೋತಿರುವ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಿದೆ. ಇನ್ನು ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಆರ್ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಈ ಪಂದ್ಯದಲ್ಲೂ ಆಡಲಿದೆ. ಇತ್ತ ಗುಜರಾತ್ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ.


Share with

Leave a Reply

Your email address will not be published. Required fields are marked *