ಕಾಸರಗೋಡು: ಕೇರಳದ ರಾ. ಹೆದ್ದಾರಿಯ ಮೊದಲ ರೀಚ್ ತಲಪಾಡಿ-ಚೆಂಗಳ ರಸ್ತೆಯನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿ ನಾಡಿಗೆ ಸಮರ್ಪಿಸಿದ್ದಾರೆ.

ಕೊಚ್ಚಿಯಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಕೇಂದ್ರ ಯೋಜನೆಗಳ ಉದ್ಘಾಟನೆ ಮತ್ತು ಘೋಷಣೆಯೊಂದಿಗೆ ತಲಪಾಡಿ-ಚೆಂಗಳ ರೀಚ್ ನ ಷಟ್ಟಥ ರಸ್ತೆಯ ಉದ್ಘಾಟನೆಯಾಗಲಿದೆ. ಕೇರಳದಲ್ಲಿ ಅತ್ಯಂತ ವೇಗದಲ್ಲಿ ಪೂರ್ಣಗೊಂಡ ಮೊದಲ ರೀಚ್ ಇದಾಗಿದೆ. 39 ಕಿ. ಮೀ ರಸ್ತೆಯು ಕಳೆದ ಅಕ್ಟೋಬರ್ ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸಿತ್ತು. ದೇಶದಲ್ಲೇ ಅತ್ಯುತ್ಕೃಷ್ಟ ಗುಣಮಟ್ಟದ ಮೊದಲ ಐದು ಹೆದ್ದಾರಿಗಳ ಸಾಲಿನಲ್ಲಿ ತಲಪಾಡಿ- ಚೆಂಗಳ ರೀಚ್ ಕೂಡಾ ಒಳಗೊಂಡಿದೆ.




