ಬೆಂಗಾಲಿ ‘ಬಿಗ್ ಬಾಸ್ 3ನೇ ಸೀಸನ್ಗೆ ಚಾಲನೆ ಸಿಕ್ಕಿದೆ. ಈ ಬಾರಿ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಈ ಬಿಗ್ ಬಾಸ್ ಕಾರ್ಯಕ್ರಮದ ಲೋಗೋ ಅನಾವರಣ ಮಾಡಲಾಗಿದೆ.

ನಿರೂಪಕರಾಗಿ ದಾದಾ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದೇ ಸಮಯದಲ್ಲಿ ಮಾತನಾಡಿರುವ ಗಂಗೂಲಿ, ‘ಬಿಗ್ ಬಾಸ್’ ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ. ಬಂಗಾಳದಲ್ಲಿ ಈ ಕಾರ್ಯಕ್ರಮ ಆಳವಾಗಿ ಬೇರೂರುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.




