ಮನೆಯಲ್ಲಿ ಎಂಡಿಎಂ ಮಾರಾಟ; ನಾಲ್ವರ ಬಂಧನ

Share with

ವಿಟ್ಲ: ಬಂಟ್ವಾಳ ತಾಲೂಕಿನ ನೇರಳಕಟ್ಟೆ ಇಂದಿರಾನಗರದ ಬಾಡಿಗೆ ಮನೆಯೊಂದರಲ್ಲಿ ಮಾದಕ ವಸ್ತುವಾದ ಎಂ.ಡಿ.ಎಂ.ಎ.ಯನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಟ್ವಾಳ ನೆಟ್ಟಮುಳ್ಳೂರು ಗ್ರಾಮದ ಭಗವಂತಕೋಡಿ ನಿವಾಸಿ ಅಶ್ರಫ್ ಜಿ. (38) ಸಹಿತ ನಾಲ್ವರನ್ನು ವಿಟ್ಲ ಪೊಲೀಸ್ ಉಪ ನಿರೀಕ್ಷಕ ರತ್ನಕುಮಾ‌ರ್ ಎಂ. ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಆರೋಪಿಯು ಹಫೀಝ್ ಯಾನೆ ಅಪ್ಪಿ, ಅಫ್ಘಾನ್ ಮತ್ತು ಅಶ್ರಫ್ ಎನ್. ಎ. ಅವರೊಂದಿಗೆ ಈ ಮನೆಯಲ್ಲಿದ್ದ. ಮನೆಯಲ್ಲಿ ಪರಿಶೀಲಿಸಿದಾಗ ಒಟ್ಟು 17.97 ಗ್ರಾಂ ತೂಕದ 1,79,700 ರೂ. ಅಂದಾಜು ಮೌಲ್ಯದ ಎಂ.ಡಿ.ಎಂ.ಎ. ಮಾದಕವಸ್ತು, ಚೂರಿ ಹಾಗೂ ಇತರ ಸೊತ್ತುಗಳು ಪತ್ತೆಯಾಗಿವೆ. ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ನಾಲ್ವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.


Share with

Leave a Reply

Your email address will not be published. Required fields are marked *