ಮಕ್ಕಳ ಅಶ್ಲೀಲ ಫೋಟೋ, ವಿಡಿಯೋಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಂಡರೂ ಕೂಡ ಪೋಕೋ, IT ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪೋಕೋ ಕಾಯ್ದೆ-2012ರ ಸೆಕ್ಷನ್ 15, IT ಕಾಯ್ದೆ-2000ರ ಸೆಕ್ಷನ್ 67(B) ಅಡಿಯಲ್ಲಿ ದಾಖಲಾಗಿರುವ ಕೇರಳದ ಬಿನೋಜ್ (38) ಎಂಬಾತನ ವಿರುದ್ಧದ ಕ್ರಿಮಿನಲ್ ಕೇಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ M. ನಾಗಪ್ರಸನ್ನ ಅವರಿದ್ದ ಪೀಠ ಈ ಮೇಲಿನ ಹೇಳಿಕೆ ನೀಡಿದೆ.




