ತಾಲಿಬಾನ್ ಗುರಿಯಾಗಿರಿಸಿ ಪಾಕ್ ಇನ್ನಷ್ಟು ದಾಳಿ.. ಮಕ್ಕಳು ಸೇರಿ ಹಲವರು ಬಲಿ..!

Share with

ಕಂದಹಾ‌ರ್: ಪಾಕಿಸ್ಥಾನವು ಅಫ್ಘಾನಿಸ್ಥಾನದ ಮೇಲೆ ದಾಳಿ ತೀವ್ರಗೊಳಿಸಿದ್ದು ಕಾಬೂಲ್, ಕಂದಹಾರ್, ಪಕ್ತಿಯಾ, ಪಕ್ತಿಕಾ ಮತ್ತು ಇತರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹೊಸ ವೈಮಾನಿಕ ದಾಳಿಗಳನ್ನು ನಡೆಸಿದೆ.

ಅಫ್ಘಾನಿಸ್ಥಾನದ ಕಂದಹಾರ್ ವಿಮಾನ ನಿಲ್ದಾಣದ ಬಳಿ ಖಾಸಗಿ ವಿಮಾನಯಾನ ಸಂಸ್ಥೆ ಕಾಮ್ ಏರ್‌ಗೆ ಸೇರಿದ ಇಂಧನ ಡಿಪೋ ಮೇಲೆ ಪಾಕಿಸ್ತಾಸ್ಥಾನ ಬಾಂಬ್ ದಾಳಿ ನಡೆಸಿದೆ ಎಂದು ತಾಲಿಬಾನ್ ಆರೋಪಿಸಿದೆ. ದಾಳಿಯಲ್ಲಿ ನಾಗರಿಕರ ಮನೆಗಳು ನಾಶವಾಗಿವೆ ಮತ್ತು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಹೇಳಿಕೊಂಡಿದೆ.

ಪೂರ್ವ ಅಫ್ಘಾನಿಸ್ಥಾನದಲ್ಲಿ ಪಾಕಿಸ್ಥಾನದ ಫಿರಂಗಿ ಮತ್ತು ಮೋರ್ಟರ್ ಗುಂಡಿನ ದಾಳಿಗೆ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ.


Share with

Leave a Reply

Your email address will not be published. Required fields are marked *