ಮದ್ಯ ಪ್ರಿಯರಿಗೆ ಬಿಗ್ ಶಾಕ್: ಮೇ 1 ರಿಂದ ಮದ್ಯದ ಬೆಲೆ ಭಾರೀ ಏರಿಕೆ ಸಾಧ್ಯತೆ!

Share with

ಬೆಂಗಳೂರು: ರಾಜ್ಯದ ಮದ್ಯ ಪ್ರಿಯರಿಗೆ ಶೀಘ್ರದಲ್ಲೇ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ರಾಜ್ಯ ಸರ್ಕಾರವು ಈಗಿರುವ ತೆರಿಗೆ ಪದ್ಧತಿಯನ್ನು ಬದಲಿಸಿ, ‘ಆಲ್ಕೋಹಾಲ್-ಇನ್-ಬೆವರೇಜ್’ (AIB) ಆಧಾರಿತ ಅಬಕಾರಿ ಸುಂಕದ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

ಈ ಹೊಸ ನೀತಿಯ ಪ್ರಕಾರ, ಮದ್ಯದ ಬಾಟಲ್‌ನಲ್ಲಿ ಇರುವ ನಿಜವಾದ ಆಲ್ಕೋಹಾಲ್ ಅಂಶವನ್ನು ಆಧರಿಸಿ ತೆರಿಗೆ ನಿಗದಿಯಾಗಲಿದೆ. ಅಂದರೆ, ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಇದರ ಪರಿಣಾಮವಾಗಿ ಸಾಮಾನ್ಯವಾಗಿ ಬಳಕೆಯಾಗುವ ಕಡಿಮೆ ಬೆಲೆಯ ವಿಸ್ಕಿ, ರಮ್, ಜಿನ್, ಬ್ರಾಂಡಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಶೀಘ್ರದಲ್ಲೇ ಕನಿಷ್ಠ ಶೇ.20ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


Share with