ಶಾಪಿಂಗ್ ಗೆ ಬಂದು ಲಿಫ್ಟ್ ನಲ್ಲಿ ಬಾಕಿಯಾಗಿ ಪರದಾಟ..! ಲಿಫ್ಟ್ ಗಾಜು ಹೊಡೆದು ಪಾರು

Share with

ನಾಗುರ: ಮಹಾರಾಷ್ಟ್ರದ ನಾಗುರದಲ್ಲಿರುವ ಜನನಿಬಿಡ ಮಾಲ್ ಒಂದರಲ್ಲಿ ತಾಂತ್ರಿಕ ದೋಷದಿಂದಾಗಿ ಲಿಫ್ಟ್ ಸ್ಥಗಿತಗೊಂಡು ಆರು ಮಂದಿ ಸಿಲುಕಿಕೊಂಡ ಘಟನೆ ನಡೆದಿದೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಲಿಫ್ಟ್‌ನೊಳಗೆ ಉಸಿರುಗಟ್ಟಿ ನರಳಾಡಿದ ಸಾರ್ವಜನಿಕರು, ಕೊನೆಗೆ ಗಾಜನ್ನು ಒಡೆದು ಹೊರಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶನಿವಾರ (ಮೇ.2) ರಂದು ನಡೆದಿದೆ.

ನಾಗುರದ ಸೀತಾಬುಲ್ಲಿ ಪ್ರದೇಶದಲ್ಲಿರುವ ‘ಫಾರ್ಚೂನ್ ಮಾಲ್’ನಲ್ಲಿ ಈ ಆತಂಕಕಾರಿ ಘಟನೆ ನಡೆದಿದ್ದು. ಮಾಲ್‌ನ ಲಿಫ್ಟ್ ಹಠಾತ್ತಾಗಿ ಮಧ್ಯದಲ್ಲೇ ಸ್ಥಗಿತಗೊಂಡಿದ್ದರಿಂದ ಅದರಲ್ಲಿದ್ದ ಆರು ಮಂದಿ ಹೊರಬರಲಾಗದೇ ಸಿಲುಕಿಕೊಂಡಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ ಲಿಫ್ಟ್‌ನೊಳಗೆ ಗಾಳಿಯ ಸಂಚಾರ ಕಡಿಮೆಯಾಗಿ ತೊಂದರೆಗೆ ಸಿಲುಕಿದ್ದಾರೆ ಈ ವೇಳೆ ಲಿಫ್ಟ್‌ನಲ್ಲಿ ಸಿಲುಕಿದವರು ತಕ್ಷಣವೇ ಮಾಲ್‌ನ ನಿರ್ವಹಣಾ ಮಂಡಳಿ ಮತ್ತು ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಆದರೆ ಆ ಕಡೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ ಮಾಲ್ ನಲ್ಲಿದ್ದ ಇತರ ಮಂದಿ ರಕ್ಷಣೆಗೆ ಮುಂದಾದರೂ ಸಾಧ್ಯವಾಗಲಿಲ್ಲ ಕೊನೆಗೆ ಬೇರೆ ದಾರಿಯಿಲ್ಲದೆ ಲಿಫ್ಟ್‌ನ ಗಾಜನ್ನು ಒಡೆದು ಒಳಗಿದ್ದ ಆರು ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಯಿತು.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿನ ತುರ್ತು ಸ್ಪಂದನಾ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಈ ಘಟನೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮಾಲ್‌ನಂತಹ ಕಿಕ್ಕಿರಿದು ತುಂಬಿರುವ ಸ್ಥಳಗಳಲ್ಲಿ ಇಂತಹ ತಾಂತ್ರಿಕ ದೋಷಗಳು ಸಂಭವಿಸಿದಾಗ ನಿರ್ವಹಣಾ ತಂಡದ ವಿಳಂಬ ಧೋರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


Share with

Leave a Reply

Your email address will not be published. Required fields are marked *