‘ಆಪರೇಷನ್ ಥಂಡರ್’ ಕಾರ್ಯಾಚರಣೆ; ಬಂಬ್ರಾಣದಲ್ಲಿರುವ ಸರಕಾರಿ ಶಾಲಾ ಆವರಣದಲ್ಲಿ ಗಾಂಜಾ ಗಿಡ ಪತ್ತೆ..!

Share with

ಮಂಜೇಶ್ವರ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಬ್ರಾಣದಲ್ಲಿರುವ ಸರ್ಕಾರಿ ಬೇಸಿಕ್‌ ಎಲ್‌ಪಿ ಶಾಲೆಯ ಆವರಣದಲ್ಲಿ ಸುಮಾರು 35 ಸೆಂ.ಮೀ. ಎತ್ತರದ ಗಾಂಜಾ ಗಿಡವನ್ನು ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಅಬಕಾರಿ ವಲಯ ನಿರೀಕ್ಷಕ ಸಲೀಂ ಕುಮಾರ್ ದಾಸ್ ನೇತೃತ್ವದ ತಂಡ ಅಬಕಾರಿ ಮಂತ್ರಿಗಳು ಜಾರಿಗೆ ತಂದ ‘ಆಪರೇಷನ್ ಥಂಡ‌ರ್’ ಭಾಗವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಬ್ರಾಣ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ವೇಳೆ ಗಾಂಜಾ ಗಿಡ ಪತ್ತೆಯಾಯಿತು. ಬಳಿಕ ಗಿಡವನ್ನು ವಶಕ್ಕೆ ಪಡೆದು ಎನ್‌ಡಿಪಿಎಸ್ (ಮಾದಕ ದ್ರವ್ಯ ಮತ್ತು ಮನೋವಿಕಾರಿ ಪದಾರ್ಥಗಳ ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಕುಂಬಳೆ ರೇಂಜ್ ಕಚೇರಿಗೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಹಾಯಕ ಅಬಕಾರಿ ನಿರೀಕ್ಷಕ (ಗ್ರೇಡ್) ಸಂತೋಷ್ ಕುಮಾರ್ ವಿ., ದಿನೇಶನ್ ಕುಂದತ್ತಿಲ್, ಸಿವಿಲ್ ಅಬಕಾರಿ ಅಧಿಕಾರಿ (ಎಚ್‌ಜಿ) ಎಂ.ವಿ. ಸುಧೀಂದ್ರನ್, ಮೋಹನ ಕುಮಾ‌ರ್ ಎಲ್., ಚಾಲಕ ಸತ್ಯನ್ ಇ.ಕೆ., ಕುಂಬಳೆ ರೇಂಜ್ ಅಬಕಾರಿ ನಿರೀಕ್ಷಕ ಕೆ.ವಿ. ಶ್ರಾವಣ್ ಹಾಗೂ ಮೊಹಮ್ಮದ್ ಸಾದಿಕ್ ಭಾಗವಹಿಸಿದ್ದರು.

ಏನಿದು ‘ಆಪರೇಷನ್‌ ಥಂಡ‌ರ್’?

‘ಆಪರೇಷನ್‌ ಥಂಡ‌ರ್’ ಕೇರಳದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ, ಗೂಂಡಾ ಚಟುವಟಿಕೆಗಳು ಹಾಗೂ ಸಂಘಟಿತ ಅಪರಾಧಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರದ ಅಬಕಾರಿ ಇಲಾಖೆ ಆರಂಭಿಸಿರುವ ವಿಶೇಷ ಕಾರ್ಯಾಚರಣೆಯಾಗಿದೆ.


Share with

Leave a Reply

Your email address will not be published. Required fields are marked *