ಕಡ್ಡಾಯ ಆನ್ಲೈನ್ ಹಾಜರಾತಿಗೆ ಸರಕಾರಿ ನೌಕರರಿಂದ ವಿರೋಧ

Share with

ಸರ್ಕಾರಿ ನೌಕರರ ಗೈರುಹಾಜರಿ ತಡೆಯಲು ಮೇ1 ರಿಂದ ಜಾರಿಗೆ ತಂದಿರುವ ಕಡ್ಡಾಯ ಆನ್‌ಲೈನ್ ಹಾಜರಾತಿ ವ್ಯವಸ್ಥೆಗೆ ರಾಜ್ಯದ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಮೊಬೈಲ್‌ ಆ್ಯಪ್ ಮೂಲಕ ಜಿಯೋ ಫೆನ್ಸ್‌ ಆಧಾರಿತ ಚೆಕ್-ಇನ್, ಚೆಕ್-ಔಟ್ ಮಾಡುವುದು ಕಡ್ಡಾಯವಾಗಿದೆ.

ಆದರೆ, ಇದಕ್ಕೆ RDPR & ಅಬಕಾರಿ ಇಲಾಖೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಕಾರ್ಯ ನಿರ್ವಹಿಸುವ PDOಗಳಿಗೆ ಇದು ಕಠಿಣ ಸವಾಲು ಎಂದು PDOಗಳ ಸಂಘವು ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರ ಬರೆದು ನಿಯಮದಿಂದ ವಿನಾಯಿತಿ ಕೋರಿದೆ.


Share with

Leave a Reply

Your email address will not be published. Required fields are marked *