ಕಾಸರಗೋಡು : ಇಲ್ಲಿನ ಅಯ್ಯಪ್ಪನಗರ ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರದಲ್ಲಿ ಜುಲೈ 17ರಿಂದ ಆಗಸ್ಟ್ 16ರವರೆಗೆ ಒಂದು ತಿಂಗಳ ಕಾಲ ರಾಮಾಯಣ ಮಾಸಾಚರಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.

ಈ ಅವಧಿಯಲ್ಲಿ ಪ್ರತಿದಿನ ಸಂಜೆ 5.45ರಿಂದ 6.45ರವರೆಗೆ ರಾಮಾಯಣ ಪಾರಾಯಣ ನಡೆಯಲಿದ್ದು, ಶ್ರೀರಾಮನ ಆದರ್ಶ ಜೀವನ, ಧರ್ಮ ಮತ್ತು ಭಕ್ತಿಯ ಸಂದೇಶವನ್ನು ಸಾರುವ ಪವಿತ್ರ ರಾಮಾಯಣ ಪಠಣದಲ್ಲಿ ಭಕ್ತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಆಯೋಜಕರು ಎಲ್ಲಾ ಭಕ್ತಾದಿಗಳನ್ನು ಕುಟುಂಬ ಸಮೇತರಾಗಿ ಆಗಮಿಸಿ, ರಾಮನಾಮ ಸ್ಮರಣೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.




