ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶಾಕ್! CIBIL ಸ್ಕೋರ್ ಕುಸಿತದ ಆತಂಕ

Share with

ನವದೆಹಲಿ: ಎಸ್‌ಬಿಐ (SBI) ಕ್ರೆಡಿಟ್ ಕಾರ್ಡ್ ಬಳಕೆದಾರರಲ್ಲಿ ಆತಂಕ ಮೂಡಿಸಿರುವ ತಾಂತ್ರಿಕ ಸಮಸ್ಯೆಯೊಂದು ವರದಿಯಾಗಿದೆ. ಹಲವು ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತವನ್ನು ಈಗಾಗಲೇ ಪಾವತಿಸಿದ್ದರೂ, ಜುಲೈ ತಿಂಗಳ ಬಿಲ್ ಇನ್ನೂ ಬಾಕಿ ಇದೆ ಎಂದು ಖಾತೆಯಲ್ಲಿ ತೋರಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡಿದ್ದಾರೆ.

ಇದರ ಪರಿಣಾಮವಾಗಿ ಕೆಲ ಬಳಕೆದಾರರ CIBIL ಸ್ಕೋರ್ 50ರಿಂದ 70 ಅಂಕಗಳವರೆಗೆ ಕುಸಿದಿರುವುದಾಗಿ ವರದಿಯಾಗಿದೆ. ಕ್ರೆಡಿಟ್ ಸ್ಕೋರ್ ಮೇಲೆ ಉಂಟಾಗಿರುವ ಪರಿಣಾಮದಿಂದ ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಹಿತಿಯ ಪ್ರಕಾರ, ಎಸ್‌ಬಿಐ ಈ ತಾಂತ್ರಿಕ ಸಮಸ್ಯೆಯ ಬಗ್ಗೆ ಅರಿವು ಹೊಂದಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಕೆಲವು ಬಳಕೆದಾರರಿಗೆ ಪ್ರತಿಕ್ರಿಯೆ ನೀಡಿರುವುದಾಗಿ ಹೇಳಲಾಗಿದೆ.

ಈ ಕುರಿತು ಎಸ್‌ಬಿಐ ಕಾರ್ಡ್ಸ್‌ನಿಂದ ಅಧಿಕೃತ ಹಾಗೂ ವಿವರವಾದ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ. ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು ತಮ್ಮ ಪಾವತಿ ರಸೀದಿಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹಾಗೂ ಅಗತ್ಯವಿದ್ದರೆ ಎಸ್‌ಬಿಐ ಕಾರ್ಡ್ ಗ್ರಾಹಕ ಸೇವೆಯನ್ನು ಸಂಪರ್ಕಿಸುವುದು ಸೂಕ್ತ.


Share with

Leave a Reply

Your email address will not be published. Required fields are marked *