ಹಾಸನ: ಚನ್ನರಾಯಪಟ್ಟಣದ ಗೂರನಹಳ್ಳಿ ಬಡಾವಣೆ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರೊಬ್ಬರ ಹತ್ಯೆ ಮಾಡಿದ ಘಟನೆ ಶನಿವಾರ (ಜು.18) ನಡೆದಿದೆ.

ಬಿ.ಎನ್. ಚನ್ನೇಗೌಡ (78 ವ) ಕೊಲೆಯಾದ ಮಾಜಿ ಶಿಕ್ಷಕ. ಮಗನಿಂದಲೇ ತಂದೆಯ ಕೊಲೆ ಶಂಕೆಯಿದ್ದು, ನಂತರ ಮಗ ಬಿಂದುಕುಮಾರ್ (42 ವ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.




