ಭಜನೆ ಮಾಡುತ್ತಲೇ ಕುಸಿದುಬಿದ್ದ ಯುವಕ

Share with

ಹಳೆಯಂಗಡಿ: ಇಲ್ಲಿನ ತೋಕೂರು ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ಅಷ್ಟಮಿ ಪ್ರಯುಕ್ತ ನಡೆಯುತ್ತಿದ್ದ ಭಜನೆ ಕಾರ್ಯಕ್ರಮದಲ್ಲಿ ಭಜನೆ ಮಾಡುತ್ತಲೇ ಕುಸಿದುಬಿದ್ದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಶುಕ್ರವಾರ (ಸೆ.04) ತಡರಾತ್ರಿ ವರದಿಯಾಗಿದೆ.

ಮೃತರನ್ನು ತೋಕೂರು ನಿವಾಸಿ ಶ್ರೀನಾಥ್ ಶೆಟ್ಟಿಗಾರ್ (38 ವ) ಎಂದು ಗುರುತಿಸಲಾಗಿದೆ.

ಶ್ರೀನಾಥ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು ಅಷ್ಟಮಿ ನಿಮಿತ್ತ ಊರಿಗೆ ಆಗಮಿಸಿದ್ದರು. ಸ್ಥಳೀಯ ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು.


Share with

Leave a Reply

Your email address will not be published. Required fields are marked *