ಮಂಗಳೂರು: ಕರಾವಳಿಯಲ್ಲಿ ಡೇಟಾ ಸೆಂಟರ್ ನಿರ್ಮಾಣಕ್ಕೆ ಸೂಕ್ತ ವಾತಾವರಣವಿದ್ದು, ಕೇಬಲ್ ಲ್ಯಾಂಡಿಂಗ್ ಸ್ಟೇಷನ್ಗಾಗಿ ಹೂಡಿಕೆದಾರರು ಹಾಗೂ ಹೊಸ ಟೆಕ್ ಪಾರ್ಕ್ ಹೂಡಿಕೆದಾರರು ಮುಂದೆ ಬರಬೇಕು ಎಂದು ಮುಖ್ಯಮಂತ್ರಿಗಳ ವಿತ್ತ ಸಲಹೆಗಾರ ಎಲ್.ಕೆ. ಅತೀಕ್ ಹೇಳಿದ್ದಾರೆ.
ನಗರದ ಡಾ | ಟಿಎಂಎ ಪೈ ಸಭಾಂ ಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಂಗಳೂರು ಟೆಕ್ನವಾಂಜಾ 2026ರ ಆರನೇ ಆವೃತ್ತಿಯನ್ನು ಉದ್ಘಾಟಿಸಿದ ಅವರು, ರಾಜ್ಯಕ್ಕೆ ಸುಸ್ಥಿರ ಡೇಟಾ ಸೆಂಟರ್ ನೀತಿ ಯನ್ನು ಪ್ರಕಟಿಸಲಾಗಿದೆ. ಕರಾವಳಿಯಲ್ಲಿ ಸೆಂಟರ್ ಸ್ಥಾಪಿಸುವ ಸಂಬಂಧ ಸರಕಾರ ಹೂಡಿಕೆದಾರರನ್ನು ನಿರೀಕ್ಷಿಸುತ್ತಿದೆ ಎಂದರು.
ಮಂಗಳೂರನ್ನು ಒಳಗೊಂಡು ಕರಾವಳಿ ಯಲ್ಲಿ ಐಟಿ ಬಿಟಿ ಸಹಿತ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೂಡಿಕೆ ಸಾಧ್ಯತೆ ಹೆಚ್ಚಿದ್ದು, ಹೂಡಿಕೆದಾರರಿಗೆ ಇದನ್ನು ಮನದಟ್ಟು ಮಾಡಬೇಕಿದೆ. ಈ ನಿಟ್ಟಿನಲ್ಲಿ ಬೀಚ್ ಪ್ರವಾಸೋದ್ಯಮವನ್ನು ಒಳಗೊಂಡು ಐಟಿ-ಬಿಟಿ ಕ್ಷೇತ್ರಕ್ಕೆ ಪೂರಕವಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಘೋಷಿತ ಯೋಜನೆಗಳ ಅನುಷ್ಠಾನ ಖಚಿತ
ಆರ್ಥಿಕ ಸಂಪ ನ್ಮೂಲಗಳಿಗೆ ಬಜೆಟ್ನ ಆಚೆ ಯೋಚಿಸುತ್ತಿದ್ದೇವೆ. ಸಂಪ ನ್ಮೂಲಗಳಿಲ್ಲದೆ ಸಿಎಂ ಯಾವುದೇ ಯೋಜನೆಗಳನ್ನು ಘೋಷಿ ಸಿಲ್ಲ. ಘೋಷಿಸಿದ ಎಲ್ಲ ಯೋಜನೆ ಗಳನ್ನೂ ಅನುಷ್ಠಾನ ಮಾಡಲಾಗುವುದು ಎಂದು ಅತೀಕ್ ಸ್ಪಷ್ಟಪಡಿಸಿದ್ದಾರೆ.




