ಪಣೋಲಿಬೈಲು ನಿವಾಸಿಗೆ ಒಲಿದ 1 ಕೋಟಿ ತಿರುವೋಣಂ ಬಂಪರ್ ಲಾಟರಿ..!!

Share with

ಕಾಸರಗೋಡು : ತಿರುವೋಣಂ ಬಂಪರ್ ಲಾಟರಿಯ ಎರಡನೇ ಬಹುಮಾನವಾದ ರೂ.1 ಕೋಟಿ ದ.ಕ.ಜಿಲ್ಲೆಯ ಪಾಲಾಗಿದೆ. ಮಂಗಳೂರು ಸಮೀಪದ ಬ೦ಟ್ವಾಳದ ಪಣೋಲಿಬೈಲ್ ನಿವಾಸಿ ರೋಹಿತ್ ಅವರಿಗೆ ಒ೦ದು ಕೋಟಿ ರೂಪಾಯಿ ಬಹುಮಾನ ಲಭಿಸಿದೆ.

ಅದೃಷ್ಟ ಒಲಿದ ಟಿಕೆಟ್‌ನೊಂದಿಗೆ ರೋಹಿತ್ ಅವರು ಸಬ್ ಏಜೆಂಟ್ ಮಂಜುನಾಥ್ ಅವರೊಂದಿಗೆ ಕಾಸರಗೋಡಿನ ನ್ಯೂ ಲಕ್ಕಿ ಸೆಂಟರ್ ಏಜೆನ್ಸಿಗೆ ಭೇಟಿ ನೀಡಿ, ತಮ್ಮ ಟಿಕೆಟ್‌ಗೆ ಅದೃಷ್ಟ ತಂದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಒಂದೇ ಟಿಕೆಟ್ ಮೂಲಕ ಕೋಟಿ ರೂಪಾಯಿ ಬಹುಮಾನ ಕರ್ನಾಟಕದ ಪಾಲಾಗಿರುವುದು ಲಾಟರಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ರೋಹಿತ್ ಅವರಿಗೆ ಬಹುಮಾನ ಲಭಿಸಿದ ಸುದ್ದಿ ತಿಳಿಯುತ್ತಿದ್ದಂತೆ ನ್ಯೂ ಲಕ್ಕಿ ಸೆಂಟರ್‌ನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.


Share with

Leave a Reply

Your email address will not be published. Required fields are marked *