ಅನ್ನ ಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು : ಇಬ್ಬರು ಆರೋಪಿಗಳಿಗೆ 1 ವರ್ಷ ಜೈಲು

Share with

ಕುಂದಾಪುರ: ಸರಕಾರದ ಅನ್ನ ಭಾಗ್ಯ ಅಕ್ಕಿಯನ್ನು ಯಾವುದೇ ದಾಖಲೆಯಿಲ್ಲದೆ ತುಂಬಿಸಿ, ದಾಸ್ತಾನು ಇರಿಸಿದ್ದ ಆರೋಪಿಗಳಾದ ಅಬ್ದುಲ್ ಅಜೀಜ್ ಹಾಗೂ ಅಬ್ದುಲ್ ಅಜೀಜ್ ಗೆ ಕುಂದಾಪುರದ ಮೂರನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

ಆರೋಪಿಗಳು 2021ರ ಜ.27 ರಂದು ಗಂಗೊಳ್ಳಿಯ ಬಾಷಾ ಮೊಹಲ್ಲಾ ಎಂಬಲ್ಲಿ 48 ಚೀಲಗಳಲ್ಲಿ 36 ಸಾವಿರ ರೂ. ಮೌಲ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದರು. ಈ ಸಂಬಂಧ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಕುರಿತಂತೆ ಆಗಿನ ಗಂಗೊಳ್ಳಿ ಪಿಎಸ್ ಐಗಳಾದ ಭೀಮಾಶಂಕ‌ರ್ ಹಾಗೂ ನಂಜಾ ನಾಯ್ಕ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆ ಬಳಿಕ ಪಿಎಸ್ ಐ ಪವನ್ ನಾಯಕ್ ಅವರು ಸಾಕ್ಷಿದಾರರನ್ನು ಕೋರ್ಟ್ ಗೆ ಹಾಜರುಪಡಿಸಲು ನೆರವಾಗಿದ್ದರು.

ಈ ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಮಣಿಕಂಠ ಎಂ. ಎಸ್. ಅವರು ಆ.1 ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ಅವರು ವಾದ ಮಂಡಿಸಿದ್ದರು.


Share with

Leave a Reply

Your email address will not be published. Required fields are marked *