ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ನಂತರ, ಇದೀಗ ಟಿ20 ಸರಣಿ ಆರಂಭವಾಗಲಿದೆ.
ರಾಂಚಿಯಲ್ಲಿ ಅಕ್ಟೋಬರ್ 9 ರಂದು ನಡೆಯಲಿರುವ ಈ ಟಿ20 ಪಂದ್ಯಕ್ಕಾಗಿ ಅಭಿಮಾನಿಗಳಲ್ಲಿ ಅಪಾರ ಉತ್ಸಾಹ ಕಂಡುಬಂದಿದೆ. ಅಭಿಮಾನಿಗಳು ಟಿಕೆಟ್ ಖರೀದಿಸಲು ತಮ್ಮ ಸರದಿಗಾಗಿ ಕಾಯುತ್ತಾ, ತಡರಾತ್ರಿಯಿಂದಲೇ ಜೆಎಸ್‌ಸಿಎ(JSCA) ಕ್ರೀಡಾಂಗಣದ ಹೊರಗೆ ಸಾಲಿನಲ್ಲಿ ನಿಂತಿರುವ ವಿಡಿಯೋಗಳು ವೈರಲ್ ಆಗಿದೆ. ಟಿಕೆಟ್ ಕೌಂಟರ್‌ನಲ್ಲಿ ಇಂದು ಬೆಳಗ್ಗೆ 9:00 ಗಂಟೆಯಿಂದ ಟಿಕೆಟ್ ಮಾರಾಟ ಆರಂಭವಾಗಿದೆ.




