ಕಾಸರಗೋಡು : ವಿ.ಡಿ. ಸತೀಶನ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಎಡ-ಬಲ ರಂಗಗಳು (ಎಲ್‌ಡಿಎಫ್-ಯುಡಿಎಫ್) ನಡೆಸುತ್ತಿರುವ ಪ್ರಯತ್ನದ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿಯ ವತಿಯಿಂದ ಮಾರ್ಚ್ ಹಾಗೂ ಪ್ರತಿಭಟನಾ ಜನಸಭೆಯು ಅಕ್ಟೋಬರ್ 14ರ ಬುಧವಾರ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಕರಂದಕ್ಕಾಡಿನಿಂದ ಸಾವಿರಾರು ಜನರು ಭಾಗವಹಿಸುವ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ.
ನಂತರ ಕಾಸರಗೋಡು ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ನಡೆಯಲಿರುವ ಪ್ರತಿಭಟನಾ ಜನಸಭೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಉದ್ಘಾಟಿಸಲಿದ್ದಾರೆ.





