ಬೆಂಗಳೂರಿನಲ್ಲಿ ಕುಂಬಳಗೋಡು ಪೊಲೀಸರು ದಾಖಲೆ ಪ್ರಮಾಣದ ಗಾಂಜಾ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ. ಕೇರಳ & ಒಡಿಶಾ ರಾಜ್ಯದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ₹1.70 ಕೋಟಿ ಮೌಲ್ಯದ 317 KG ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾಂದ್ ಪಾಷ, ವಿಷ್ಣು ಬಂಧಿತ ಆರೋಪಿ. ಈ ಆರೋಪಿಗಳು ಕಾರಿನ ಸೀಟ್ಗಳಲ್ಲಿ ಗಾಂಜಾವನ್ನು ಆಡಗಿಸಿ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಕಾರನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದ ವೇಳೆ ಇವರ ಅಸಲಿ ಆಟ ಬಯಲಾಗಿದೆ.





