
ಸಕಲೇಶಪುರ: ಕಳೆದ 15 ವರ್ಷಗಳಿಂದ ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಎಸ್ಎಸ್ ಸ್ಟೀಲ್ಸ್ ಸಂಸ್ಥೆಯು ತನ್ನ ಸೇವಾ ಪಯಣವನ್ನು ಯಶಸ್ವಿಯಾಗಿ ಮುಂದುವರಿಸಿದೆ ಈ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.. ಈ ಅಂಗವಾಗಿ ಇಂದು ಉಚಿತ ನೇತ್ರ ತಪಾಸಣಾ ಶಿಬಿರ ಬೆಳಗ್ಗೆ 9:00 ರಿಂದ ಮಧ್ಯಾಹ್ನ 3:00ರವರೆಗೆ ಆಯೋಜಿಸಲಾಗಿದೆ.
ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬಂದಿರುವ ಸಂಸ್ಥೆಯು, ಇಂದು ಉಕ್ಕಿನ ವ್ಯಾಪಾರ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ. ಕೇವಲ ಉಕ್ಕಿನ ಮಾರಾಟಕ್ಕೆ ಸೀಮಿತವಾಗದೆ, ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಉತ್ತಮ ಸೇವೆ ನೀಡುವ ಮೂಲಕ ಜನಮನ್ನಣೆ ಗಳಿಸಿದೆ. , ಗಾರೆ ಕೆಲಸಗಾರರು, ಬಾರ್ ಬೆಂಡರ್ಗಳು, ಪ್ಲಂಬರ್ಗಳು, ಫ್ಯಾಬ್ರಿಕೇಟರ್ಗಳು ಹಾಗೂ ಎಂಜಿನಿಯರ್ಗಳು ಸೇರಿದಂತೆ ಕಟ್ಟಡ ನಿರ್ಮಾಣ ಕ್ಷೇತ್ರದ ವಿವಿಧ ವೃತ್ತಿಪರರಿಗೆ ಸಂಸ್ಥೆಯು ಉತ್ತಮ ಸಹಕಾರ ನೀಡುತ್ತಿದೆ. ಗ್ರಾಹಕರ ವಿಶ್ವಾಸ ಮತ್ತು ನಿರಂತರ ಬೆಂಬಲವೇ ಸಂಸ್ಥೆಯ 15 ವರ್ಷಗಳ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದೆ.




