ಎಸ್‌ಎಸ್ ಸ್ಟೀಲ್ಸ್‌ಗೆ 15 ವರ್ಷಗಳ ಯಶಸ್ವಿ ಪಯಣ

Share with



ಸಕಲೇಶಪುರ:  ಕಳೆದ 15 ವರ್ಷಗಳಿಂದ ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಎಸ್‌ಎಸ್ ಸ್ಟೀಲ್ಸ್ ಸಂಸ್ಥೆಯು ತನ್ನ ಸೇವಾ ಪಯಣವನ್ನು ಯಶಸ್ವಿಯಾಗಿ ಮುಂದುವರಿಸಿದೆ ಈ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.. ಈ ಅಂಗವಾಗಿ ಇಂದು ಉಚಿತ ನೇತ್ರ ತಪಾಸಣಾ ಶಿಬಿರ ಬೆಳಗ್ಗೆ 9:00 ರಿಂದ ಮಧ್ಯಾಹ್ನ 3:00ರವರೆಗೆ ಆಯೋಜಿಸಲಾಗಿದೆ.

ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬಂದಿರುವ ಸಂಸ್ಥೆಯು, ಇಂದು ಉಕ್ಕಿನ ವ್ಯಾಪಾರ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ. ಕೇವಲ ಉಕ್ಕಿನ ಮಾರಾಟಕ್ಕೆ ಸೀಮಿತವಾಗದೆ, ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಉತ್ತಮ ಸೇವೆ ನೀಡುವ ಮೂಲಕ ಜನಮನ್ನಣೆ ಗಳಿಸಿದೆ. , ಗಾರೆ ಕೆಲಸಗಾರರು, ಬಾರ್ ಬೆಂಡರ್‌ಗಳು, ಪ್ಲಂಬರ್‌ಗಳು, ಫ್ಯಾಬ್ರಿಕೇಟರ್‌ಗಳು ಹಾಗೂ ಎಂಜಿನಿಯರ್‌ಗಳು ಸೇರಿದಂತೆ ಕಟ್ಟಡ ನಿರ್ಮಾಣ ಕ್ಷೇತ್ರದ ವಿವಿಧ ವೃತ್ತಿಪರರಿಗೆ ಸಂಸ್ಥೆಯು ಉತ್ತಮ ಸಹಕಾರ ನೀಡುತ್ತಿದೆ. ಗ್ರಾಹಕರ ವಿಶ್ವಾಸ ಮತ್ತು ನಿರಂತರ ಬೆಂಬಲವೇ ಸಂಸ್ಥೆಯ 15 ವರ್ಷಗಳ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದೆ.


Share with

Tags:

Leave a Reply

Your email address will not be published. Required fields are marked *