‘ಎಕ್ಸ್’ಗೆ ಪಾದಾರ್ಪಣೆ ಮಾಡಿದ ಸೋನಿಯಾ ಗಾಂಧಿ..! ಮೊದಲ ಪೋಸ್ಟ್ ನಲ್ಲಿ ಪತಿ ಜೊತೆಗಿನ ಪ್ರೇಮ ಪಯಣದ ನೆನಪು

Share with

ನವದೆಹಲಿ: ಇನ್ ಸ್ಟಾಗ್ರಾಮ್ ಗೆ ಪಾದಾರ್ಪಣ ಮಾಡಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶನಿವಾರ (ಅ.24) ಸಾಮಾಜಿಕ ಜಾಲತಾಣ ‘ಎಕ್ಸ್’ (X)ಗೆ ಪದಾರ್ಪಣೆ ಮಾಡಿದ್ದು, ತಮ್ಮ ಮೊದಲ ಪೋಸ್ಟ್‌ನಲ್ಲಿ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮ ಪಯಣವನ್ನು ಸ್ಮರಿಸಿದ್ದಾರೆ. ಇದೇ ವೇಳೆ ತಮ್ಮ ಚೊಚ್ಚಲ ಪುಸ್ತಕದ ಕುರಿತಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸೋನಿಯಾ ಗಾಂಧಿ ಅವರ ಮೊದಲ ಪುಸ್ತಕ ‘ಬಿಲಾಂಗಿಂಗ್ – ಎ ಜರ್ನಿ ಆಫ್ ‘ (Belonging – A Journey of Love) 2 10 ಬಿಡುಗಡೆಯಾಗಲಿದೆ. ಈ ಪುಸ್ತಕದಲ್ಲಿ ರಾಜೀವ್ ಗಾಂಧಿ ಅವರೊಂದಿಗಿನ ನೆನಪುಗಳು ಹಾಗೂ ತಮ್ಮ ಯೌವನದ ದಿನಗಳಿಂದ ಇಲ್ಲಿಯವರೆಗಿನ ಜೀವನ ಪಯಣವನ್ನು ಅವರು ಹಂಚಿಕೊಂಡಿದ್ದಾರೆ.

ತಮ್ಮ ಮೊದಲ ಎಕ್ಸ್ ಪೋಸ್ಟ್‌ನಲ್ಲಿ ಸುಮಾರು ಎರಡು ನಿಮಿಷಗಳ ವಿಡಿಯೋ ಹಂಚಿಕೊಂಡಿರುವ ಸೋನಿಯಾ ಗಾಂಧಿ, ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ, ಇಬ್ಬರ ಅಪರೂಪದ ಛಾಯಾಚಿತ್ರಗಳು ಹಾಗೂ ಅವರು ಮೊದಲ ಬಾರಿಗೆ ಭೇಟಿಯಾದ ರೆಸ್ಟೋರೆಂಟ್‌ನ ಚಿತ್ರವನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ.

‘ಪುಟ್ಟ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ಆರಂಭವಾದ ಪ್ರೇಮ ಪಯಣ’

”ಕೇಂಬ್ರಿಡ್ಜ್‌ನ ಪುಟ್ಟ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ನನ್ನ ಪ್ರೇಮ ಪಯಣ ಆರಂಭವಾಯಿತು. ರಾಜೀವ್ ಮತ್ತು ನಾನು ಪ್ರೀತಿ, ನಗು ಹಾಗೂ ನೆನಪುಗಳಿಂದ ತುಂಬಿದ ಸುಂದರ ಲೋಕವೊಂದನ್ನು ಕಟ್ಟಿಕೊಂಡಿದ್ದೆವು. ನವೆಂಬರ್ 10ರಂದು ಆ ಲೋಕವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ” ಎಂದು ಸೋನಿಯಾ ಗಾಂಧಿ ತಮ್ಮ ಮೊದಲ ಪೋಸ್ಟ್‌ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *