ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿವೆ. ಬೆಲೆ ಏರಿಕೆ, ಇಂಧನ, ಎಲ್ಪಿಜಿ ಕೊರತೆ, ವಿದ್ಯುತ್ ಕಡಿತವನ್ನು ಖಂಡಿಸಿ ಶನಿವಾರ ಪ್ರಧಾನಿ ತಾರಿಕ್ ರೆಹಮಾನ್ ಸರ್ಕಾರದ ವಿರುದ್ಧ ಢಾಕಾದಲ್ಲಿ ನ್ಯಾಷನಲ್ ಸಿಟಿಜನ್ ಪಕ್ಷ (ಎನ್ಸಿಪಿ) ಪ್ರತಿಭಟನೆ ನಡೆಸಿದೆ.
ಇದೇ ವೇಳೆ ಭಾರತ ವಿರೋಧಿ ಘೋಷಣೆಗಳು ಕೇಳಿಬಂದಿವೆ. ಎನ್ಸಿಪಿ ಸಂಚಾಲಕ ನಹೀದ್ ಇಸ್ಲಾಂ ಮಾತನಾಡಿ, ಭಾರತದ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.
ಗಡಿ ಭಾಗದಲ್ಲಿ ಸಾವುಗಳು ಸಂಭವಿಸುತ್ತಿವೆ ಎಂದು ಆರೋಪಿಸಿದ ಅವರು, ಮುಂಬರುವ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿರುವ ಗಂಗಾ ನೀರು ಹಂಚಿಕೆ ಒಪ್ಪಂದದ ಬಗ್ಗೆಯೂ ಎಚ್ಚರಿಕೆ ನೀಡಿದರು.




