ಖಾಸಗಿ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ನೌಶಾದ್..! ಮನನೊಂದು ಬಿಇ ವಿದ್ಯಾರ್ಥಿನಿ ಆತ್ಮಹತ್ಯೆ

Share with

ಹಾಸನ: ಖಾಸಗಿ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರಿಂದ ಮನ ನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಕಲೇಶಪುರ ತಾಲೂಕು ಬೆಳಗೋಡು ಗ್ರಾಮದಲ್ಲಿ ನಡೆದಿದೆ.

ಬೆಳಗೋಡು ಗ್ರಾಮದ ಭವಿತಾ ಎಂಬುವವರ ಮಗಳು ಹಿಮಾ ಮಂಗ ಳೂರಿನ ಕರಾವಳಿ ಎಂಜಿನಿಯರ್‌ಾಲೇ ಜಿನಲ್ಲಿ 3ನೇ ವರ್ಷ ಬಿ.ಇ ವ್ಯಾಸಂಗ ಮಾಡುತ್ತಿದ್ದು, ಆಕೆ ಎಸ್‌ಎಸ್‌ಎಲ್‌ಸಿ ಯನ್ನು ಅರೇಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವಳಿಗೆ ಬ್ಯಾದನೆ ಗ್ರಾಮದ ನೌಶಾದ್ ಎಂಬಾತನ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು.

ಹೀಗಿರುವಾಗ ಹಿಮಾಳು ಮಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನೌಶಾದ್ ಅಲ್ಲಿಗೆ ಹೋಗುತ್ತಿದ್ದ ಇಬ್ಬರೂ ಎಲ್ಲಾ ಕಡೆ ಸುತ್ತಾಡುತ್ತಿದ್ದರು. ಇವರಿಬ್ಬರ ಪ್ರೀತಿಯ ವಿಚಾರವು ಮನೆಯವರಿಗೆ ಗೊತ್ತಾಗಿ ನೌಶಾದ್ ನನ್ನು ಪ್ರೀತಿಸಬೇಡ ಬಿಟ್ಟು ಬಿಡು, ಚೆನ್ನಾಗಿ ಓದು ಎಂದು ತಿಳವಳಿಕೆ ಹೇಳಿದ್ದರು. ತಂದೆ-ತಾಯಿಗೆ ತೊಂದರೆ ಕೊಡಬಾರದು ಎಂದು ನಮ್ಮ ಪ್ರೀತಿಯನ್ನು ಇಲ್ಲಿಗೆ ನಿಲ್ಲಿಸಿ ಬಿಡೋಣ ಎಂದು ನೌಶಾದ್‌ಗೆ ಹೇಳಿದ್ದಕ್ಕೆ ಹಿಮಾಳೊಂದಿಗೆ ಆತ ಜಗಳ ಮಾಡಿದ್ದು, ಅವಳು ಸಾಕಷ್ಟು ಬಾರಿ ಆತನಿಗೆ ಹೇಳಿದರೂ, ಕೇಳದೆ ಇಬ್ಬರು ಕೈ ಹಿಡಿದು ಸುತ್ತಾಡಿದ ಕೆಲವೊಂದು ಫೋಟೋ ಇನ್‌ಸ್ಟಾಗ್ರಾಂನಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಹಾಕಿದ್ದನು.

ಫೋಟೋ ಡಿಲೀಟ್ ಮಾಡು ಎಂದು ಹೇಳಿದರೂ, ಕೇಳದೆ ಫೋಟೋ ಡಿಲೀಟ್ ಮಾಡದೆ ಸತಾಯಿಸುತ್ತಿ ದ್ದುದ್ದರಿಂದ ಬೇಸರ ಗೊಂಡ ಹಿಮಾ ಕಳೆದ ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ ಕಳೆನಾಶಕ ಸೇವನೆ ಮಾಡಿ ಅಸ್ವಸ್ಥಳಾಗಿದ್ದಳು.

ಪ್ರಕರಣ ದಾಖಲು

ಆಕೆಯನ್ನು ಚಿಕಿತ್ಸೆ ಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿ ಯಾಗದೇ ಶುಕ್ರವಾರ ಬೆಳಗ್ಗೆ ಆಕೆ ಮೃತಪಟ್ಟಳು. ತಮ್ಮ ಮಗಳು ಹಿಮಾಳಿಗೆ ಹಿಮಾಳ ವೈಯುಕ್ತಿಕ ಪೋಟೋ ಇನ್ ಸ್ಟಾಗ್ರಾಂನಲ್ಲಿ ನೌಶಾದ್ ಹಾಕುತ್ತೇನೆಂದು ಬೆದರಿಕೆ ಹಾಕಿದ್ದರಿಂದ ಮನ ನೊಂದು ಅವಳು ವಿಷ ಸೇವನೆ ಮಾಡಿದ್ದು, ತಮ್ಮ ಮಗಳ ಸಾವಿಗೆ ಕಾರಣನಾದ ನೌಶಾದ್‌ನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಮೃತಳ ತಾಯಿ ಭವಿತಾ ಪ್ರಕರಣ ದಾಖಲಿಸಿದ್ದಾರೆ.

ಹಿಂದೂ ಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು ಕಠಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.


Share with

Leave a Reply

Your email address will not be published. Required fields are marked *