ಕರಾವಳಿಯ ಬೀಚ್ ಗಳಲ್ಲಿ ಕಂಡ ಅಪರೂಪದ ದೃಶ್ಯ..! ನೀಲಿ ನೀಲಿಯಾದ ಸಮುದ್ರದ ಅಲೆಗಳು…!!

Share with

ಸುರತ್ಕಲ್: ಸುರತ್ಕಲ್ ಸಹಿತ ಮಂಗಳೂರು ಕರಾವಳಿಯ ಕೆಲವು ಬೀಚ್‌ಗಳಲ್ಲಿ ರಾತ್ರಿ ವೇಳೆ ಸಮುದ್ರದ ಅಲೆಗಳು ನೀಲಿ ಬಣ್ಣದಲ್ಲಿ ಹೊಳೆಯುವ ಅಪರೂಪದ ದೃಶ್ಯ ಕಂಡುಬಂದಿದೆ.

ಇದು ಯಾವುದೇ ರಾಸಾಯನಿಕ ಮಾಲಿನ್ಯದಿಂದಲ್ಲ, ಬದಲಾಗಿ ನೈಸರ್ಗಿಕ ವಿದ್ಯಮಾನ. ಸಮುದ್ರದಲ್ಲಿ ಬೆಳೆದಿರುವ ನಾಕ್ವಿಲುಕಾ ಸಿಂಟಿಲಾನ್ಸ್ ಎಂಬ ಡೈನೋಫ್ಲಾಜೆಲೇಟ್ ಸೂಕ್ಷ್ಮ ಜೀವಿಯಿಂದ ಈ ಬೆಳಕು ಉಂಟಾಗುತ್ತದೆ. ಈ ಜೀವಿಯ ದೇಹದಲ್ಲಿರುವ ಲೂಸಿಫೆರಿನ್, ಲೂಸಿಫೆರೇಸ್ ಎಂಬ ರಾಸಾಯನಿಕಗಳು ಆಮ್ಲಜನಕದೊಂದಿಗೆ ಸೇರಿ ಬೆಳಕು ಹೊರಸೂಸುತ್ತವೆ. ಇದನ್ನೇ ಬಯೋಲುಮಿನಿಸೆನ್ಸ್ ಅಥವಾ ಸೀ ಸ್ಪಾರ್ಕಲ್ ಎಂದು ಕರೆಯಲಾಗುತ್ತದೆ.

ಮಳೆಗಾಲದ ಬಳಿಕ ಸಮುದ್ರಕ್ಕೆ ಹೆಚ್ಚು ಪೋಷಕಾಂಶ ಸೇರಿದಾಗ ಈ ಜೀವಿಗಳು ಹೆಚ್ಚಾಗುತ್ತವೆ ಎಂಬುದು ತಜ್ಞರ ಅನಿಸಿಕೆ.


Share with

Leave a Reply

Your email address will not be published. Required fields are marked *