ಬಿಗ್‌ಬಾಸ್ ಮನೆಯವರಿಗೆ ಮಕ್ಕರ್ ಮಾಡಿ ಸಿಕ್ಕಿಬಿದ್ದ ಗಾನವಿ ! ಕಿಚ್ಚ ಸುದೀಪ್ ಮುಂದೆ ಸಿಕ್ಕಿಬಿದ್ದ ಸ್ಪರ್ಧಿ

Share with

ಬಿಗ್‌ಬಾಸ್ ಕನ್ನಡ: ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಗಾನವಿ ಹೇಳಿದ್ದ ಮಾತುಗಳ ಕುರಿತು ಇದೀಗ ಚರ್ಚೆ ಶುರುವಾಗಿದೆ. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಗಾನವಿ ಅವರ ಹಿಂದಿನ ಹೇಳಿಕೆಯ ವಿಡಿಯೋ ಪ್ರದರ್ಶಿಸುವ ಮೂಲಕ ಅಸಲಿ ವಿಚಾರವನ್ನು ಮನೆಯ ಮಂದಿಯ ಮುಂದೆ ತೆರೆದಿಟ್ಟಿದ್ದಾರೆ.

ಕಳೆದ ವಾರ ಬಿಗ್‌ಬಾಸ್ ಸ್ಪರ್ಧಿಗಳಿಗೆ ಅವರ ಕುಟುಂಬದವರಿಂದ ಪತ್ರಗಳು ಬಂದಿದ್ದವು. ಈ ಪತ್ರಗಳನ್ನು ಪಡೆಯಲು ಸ್ಪರ್ಧಿಗಳಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿತ್ತು. ಗಾನವಿ ಮತ್ತು ಆಸಿಯಾ ಅವರಿಗೆ ಮನೆಯ ಸದಸ್ಯರ ಮನವೊಲಿಸಿ ಪತ್ರ ಪಡೆಯುವ ಸವಾಲು ನೀಡಲಾಗಿತ್ತು.

ಈ ವೇಳೆ ಗಾನವಿ ಕಣ್ಣೀರು ಹಾಕುತ್ತಾ, ‘ನನ್ನ ತಾಯಿ ಸಿಂಗಲ್ ಮದರ್. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ’ ಎಂದು ಹೇಳಿದ್ದರು. ಇದರಿಂದ ಮನೆಯ ಸದಸ್ಯರು ಭಾವುಕರಾಗಿದ್ದರು. ಆಸಿಯಾ ತಮ್ಮ ಕುಟುಂಬದ ಪತ್ರ ತಮಗೆ ಏಕೆ ಬೇಕು ಎಂಬುದನ್ನು ವಿವರಿಸಿದರೂ, ಗಾನವಿಯ ಭಾವುಕ ಮಾತುಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿತ್ತು. ಅಂತಿಮವಾಗಿ ಗಾನವಿ ಪತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಆದರೆ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಅವರು ಗಾನವಿ ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದಾಗ ನೀಡಿದ್ದ ಪರಿಚಯದ ವಿಡಿಯೋವನ್ನು ಪ್ರದರ್ಶಿಸಿದರು. ಅದರಲ್ಲಿ ಗಾನವಿ ತಮ್ಮದು ಅವಿಭಕ್ತ ಕುಟುಂಬವಾಗಿದ್ದು, ಒಟ್ಟು 18 ಮಂದಿ ಒಂದೇ ಕುಟುಂಬದಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು.

ಈ ವಿಡಿಯೋ ನೋಡಿದ ಮನೆಯ ಸದಸ್ಯರು ಅಚ್ಚರಿಗೊಂಡರು. ವಿಶೇಷವಾಗಿ ಗಾನವಿಗೆ ಬೆಂಬಲವಾಗಿ ಮತ ಹಾಕಿದ್ದ ತಾಂಡವ್ ಕೂಡ ಶಾಕ್ ಆದರು.

ಇದಕ್ಕೆ ಸ್ಪಷ್ಟನೆ ನೀಡಿದ ಗಾನವಿ, ಮಂಗಳೂರಿನಲ್ಲಿ ತಮ್ಮ ಕುಟುಂಬವಿದೆ. ಹಿಂದೆ ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದರೂ ಈಗ ಹಾಗಿಲ್ಲ. ತಮ್ಮ ತಾಯಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಯೂ ಇರುತ್ತದೆ. ತಾಯಿಯೊಂದಿಗೆ ಮಕ್ಕಳು ಇರುವುದಿಲ್ಲ ಎಂಬ ಕಾರಣಕ್ಕೆ ಅವರ ಆರೋಗ್ಯದ ಬಗ್ಗೆ ಕಾಳಜಿಯಿಂದ ಟಾಸ್ಕ್ ವೇಳೆ ಹಾಗೆ ಹೇಳಿದ್ದಾಗಿ ಸಮರ್ಥಿಸಿಕೊಂಡರು.

ಈ ಘಟನೆ ಬಿಗ್‌ಬಾಸ್ ಮನೆಯೊಳಗೆ ಹೊಸ ಚರ್ಚೆಗೆ ಕಾರಣವಾಗಿದ್ದು, ಗಾನವಿ ಅವರ ಹೇಳಿಕೆಗಳ ಬಗ್ಗೆ ವೀಕ್ಷಕರಲ್ಲೂ ಕುತೂಹಲ ಮೂಡಿಸಿದೆ.


Share with

Leave a Reply

Your email address will not be published. Required fields are marked *