ಪುತ್ತೂರು: ಮುಕ್ರಂಪಾಡಿ ಪುತ್ತಿಲ ಪರಿವಾರ ಕಚೇರಿ ಮುಂಭಾಗ ನ.10ರಂದು ತಲವಾರು ಝಲಪಿಸಿದ ಪ್ರಕರಣಕ್ಕೆ ಸಂಬಂಧಿಸಿದ ಏಳು ಮಂದಿ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಶಾಂತಿಗೋಡು ನಿವಾಸಿ ದಿನೇಶ್ ಪಂಜಿಗ, ನರಿಮೊಗರುವಿನ ಭವಿತ್, ಬೊಳ್ವಾರ್ ನಿವಾಸಿ ಮನ್ವಿತ್, ಚಿಕ್ಕಮುನ್ನೂರಿನ ಜಯಪ್ರಕಾಶ್, ಚರಣ್, ಬನ್ನೂರಿನ ಮನೀಶ್, ಕಬಕದ ವಿನೀತ್ ಗೆ ಜಾಮೀನು ಮಂಜೂರಾಗಿದೆ. ಈ ಪ್ರಕರಣದ ಉಳಿದ ಇಬ್ಬರು ಅಪ್ರಾಪ್ತ ಬಾಲಕರು ಪ್ರಕರಣ ನಡೆದ ದಿನದಂದೇ ರಾತ್ರಿ ಬಿಡುಗಡೆಯಾಗಿದ್ದಾರೆ.
ತಲವಾರು ಝಲಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗಳಿಗೆ ನ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ನ್ಯಾಯಾಂಗ ಬಂಧನಕ್ಕೊಳಗಾಗಿದ್ದ 7 ಮಂದಿ ಆರೋಪಿಗಳಿಗೆ ನ್ಯಾಯಾಲಯವು ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.