ಪುತ್ತೂರು: ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿ ಅವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.1ರಂದು ಸಂಜೆ ನಡೆದಿದೆ.


ಮೃತ ಯುವಕನನ್ನು ಆರ್ಲಪದವು ನಿವಾಸಿ ವಿಜಯ್ ಕುಮಾರ್(38) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಮೃತರು ತಂದೆ ಶಿವಪ್ಪ ನಾಯ್ಕ, ತಾಯಿ ಲಲಿತಾ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




