ಉಪ್ಪಳ: ಹದಗೆಟ್ಟ ರಸ್ತೆಯಲ್ಲಿ ತುಂಬಿಕೊಂಡ ಮಳೆ ನೀರು; ವಿವಿಧ ಕಡೆ ಸಂಚಾರ ಸಮಸ್ಯೆ

Share with

ಉಪ್ಪಳ: ದಿಢೀರನೆ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ನೀರು ಹದಗೆಟ್ಟ ರಸ್ತೆಯಲ್ಲಿ ತುಂಬಿ ವಾಹನಗಳ ಸಂಚಾರಕ್ಕೆ ತೀರ ಸಮಸ್ಯೆಯಾಗಿರುವುದಾಗಿ ದೂರಲಾಗಿದೆ.

ಮಳೆ ನೀರು ಹದಗೆಟ್ಟ ರಸ್ತೆಯಲ್ಲಿ ತುಂಬಿ ವಾಹನಗಳ ಸಂಚಾರಕ್ಕೆ ಸಮಸ್ಯೆ

ಹೆದ್ದಾರಿಯಿಂದ ಕೋಡಿಬೈಲು ರಸ್ತೆಗೆ ಪ್ರವೇಶಿಸುವಲ್ಲಿ ಮಳೆ ನೀರು ನಿಂತು ಶೋಚನೀಯವಸ್ಥೆಯಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ನಡೆದು ಹೋಗುವ ಜನರ ಮೈಮೇಲೆ ಕೆಸರು ನೀರಿನ ಅಭಿಷೇಕ ಉಂಟಾಗುತ್ತಿದೆ. ನಯಬಜಾರ್ ಅಂಬಾರು ರಸ್ತೆ, ಪ್ರತಾಪನಗರ ಸಹಿತ ಹಲವೆಡೆ ಹದಗೆಟ್ಟು ಶೋಚನೀಯ ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ದುಸ್ಥರವಾಗಿದೆ. ಸಂಬಂಧಪಟ್ಟ ಅಧಿಕೃತರು ರಸ್ತೆಯ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *