
ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಎಸಿಪಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಹಾಗೂ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬ್ದುಲ್ ಅಲ್ತಾಫ್ (49) ಎಂಬಾತ ಬಂಧಿತ ಆರೋಪಿ. ಆರೋಪಿ ಅಲ್ತಾಫ್ ಕೋಟೆಪುರದ ರಸ್ತೆ ಬದಿಯ ಮನೆಯಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದು, ಮನೆಯೊಳಗೆ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ದಾಸ್ತಾನು ಇರಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿಯನ್ವಯ ಎಸಿಪಿ ಧನ್ಯ ನಾಯಕ್ ನೇತೃತ್ವದಲ್ಲಿ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಎಚ್.ಎನ್, ಸಿಬ್ಬಂದಿಗಳಾದ ರಿಜಿ, ಶಾಜು ನಾಯರ್, ಶಿವಕುಮಾರ್, ಮಹೇಶ್, ಅಕ್ಬರ್ ತಂಡ ದಾಳಿ ನಡೆಸಿ ಸುಮಾರು 55ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಮತ್ತು ಸುಮಾರು 280 ಲೀಟರ್ ಪೆಟ್ರೋಲ್ ವಶ ಪಡಿಸಿಕೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




