ಸುಳ್ಯ: ಗೋಡಾನಿಗೆ ಆಕಸ್ಮಿಕ ಬೆಂಕಿ; ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು..!

Share with

ಸುಳ್ಯ: ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಚರಿಸುತ್ತಿರುವ ಆರ್.ಕೆ ಬ್ಯಾಂಗಲ್ ಅಂಗಡಿಯ ಗೋಡಾನಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಳೆ ಮತ್ತು ಫ್ಯಾನ್ಸಿ ಐಟಂಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ.

ಅಂಗಡಿಯ ಗೋಡಾನಿಗೆ ಆಕಸ್ಮಿಕ ಬೆಂಕಿ

ಗೋಡಾನಿಂದ ಹೊಗೆ ಬರುವುದನ್ನು ನೋಡಿದ ಅಂಗಡಿ ಮಾಲಕರು ಸ್ಥಳೀಯರಿಗೆ ತಿಳಿಸಿದ್ದಾರೆ. ಸ್ಥಳೀಯ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಸ್ಥಳಕ್ಕಾಗಮಿಸಿ ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ತೆರಳಿ ನೀರು ಹಾಯಿಸುವ ಪ್ರಯತ್ನ ಮಾಡಿದರು. ಆದರೂ ಕೆಲ ಬೆಲೆ ಬಾಳುವ ಫ್ಯಾನ್ಸಿ ವಸ್ತುಗಳು ಅದಾಗಲೇ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದ್ದವು ಎಂದು ತಿಳಿದು ಬಂದಿದೆ.

ಸ್ಥಳೀಯ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಸ್ಥಳಕ್ಕಾಗಮಿಸಿ ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ತೆರಳಿ ನೀರು ಹಾಯಿಸುವ ಪ್ರಯತ್ನ ಮಾಡಿದರು

ಬೆಂಕಿ ನಂದಿಸುವ ಕಾರ್ಯದಲ್ಲಿ ಸ್ಥಳೀಯರು ಸಹಕರಿಸಿದ್ದು, ಈ ಪೈಕಿ ದಿನೇಶ್, ಹರಿಪ್ರಸಾದ್, ಪುನೀತ್, ಖಾಲಿದ್, ಶಾಫಿ, ಹಾರಿಸ್, ಯು.ಪಿ ಬಶೀರ್ ಮೊದಲಾದವರು ಸಹಕರಿಸಿದರು. ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.


Share with

Leave a Reply

Your email address will not be published. Required fields are marked *