‘ದಿ ಹಿಲ್ಟ್ ಸೂಟ್’ ಹೋಟೆಲ್‌ಗೆ ಬಿ.ವೈ. ವಿಜಯೇಂದ್ರ ಭೇಟಿ — ಶುಭ ಹಾರೈಕೆ

Share with


ಸಕಲೇಶಪುರ: ಪಟ್ಟಣದ ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಪುನೀತ್ ಬನ್ನಳ್ಳಿ ಅವರ ನೂತನ ಉದ್ಯಮ ‘ದಿ ಹಿಲ್ಟ್ ಸೂಟ್’  ಹೋಟೆಲ್‌ಗೆ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಅವರು ಇತ್ತೀಚೆಗೆ ಭೇಟಿ ನೀಡಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಹಾಗೂ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ಉಪಸ್ಥಿತರಿದ್ದರು. ಹೋಟೆಲ್‌ಗೆ ಆಗಮಿಸಿದ ಎಲ್ಲಾ ಗಣ್ಯರನ್ನು ಪುನೀತ್ ಬನ್ನಳ್ಳಿ ಅವರು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು. ಅಲ್ಲದೆ, ತಮ್ಮ ಹೊಸ ಉದ್ಯಮಕ್ಕೆ ಭೇಟಿ ನೀಡಿ ಹಾರೈಸಿದ ಪ್ರಮುಖ ನಾಯಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.


Share with

Tags:

Leave a Reply

Your email address will not be published. Required fields are marked *