ದೇಲಂಪಾಡಿ: ಸ್ವಾತಂತ್ರ್ಯಾನಂತರ ಒಂಬತ್ತು ಬಾರಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದರೂ, ಈ ಬಾರಿ ಮಾತ್ರ ಅದನ್ನು ವಿವಾದ ಮಾಡುತ್ತಿರುವುದು ಪ್ರಜಾಪ್ರಭುತ್ವ ಮಾರ್ಗದಲ್ಲಿ ಇನ್ನು ಮುಂದೆ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ನಾಯಕತ್ವದ ಅರಿವಿನಿಂದಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.
ಬೆಳ್ಳಿಪ್ಪಾಡಿ ದೇವರಗುಂಡ ತರವಾಡು ಸಭಾಂಗಣದಲ್ಲಿ ನಡೆದ ಬಿಜೆಪಿ ದೇಲಂಪಾಡಿ ಏರಿಯಾ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೆಹಲಿಯಲ್ಲಿ ಕೆಲವೇ ಸಾವಿರ ಜನರನ್ನು ಒಗ್ಗೂಡಿಸಿ ‘ಭಾರತ ಪ್ರತಿಭಟಿಸುತ್ತಿದೆ’ ಎಂಬ ತಪ್ಪು ಕಲ್ಪನೆಯನ್ನು ಹರಡಲು ಮೋದಿ ವಿರೋಧಿ ಶಕ್ತಿಗಳು ನಡೆಸುತ್ತಿರುವ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದಂತಹುದೇ ಗಲಭೆ ಮತ್ತು ದಂಗೆಗೆ ಪ್ರತಿಪಕ್ಷಗಳು ಹಾಗೂ ಐಸಾ, ಕಾಕ್ರೋಚ್ ಜನತಾ ಪಾರ್ಟಿಯಂತಹ ಸಂಘಟನೆಗಳು ಯತ್ನಿಸುತ್ತಿವೆ ಎಂದೂ ಅಶ್ವಿನಿ ಆರೋಪಿಸಿದರು.
ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆ ಎಂಬುದಕ್ಕಿಂತ ಹೆಚ್ಚಾಗಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮೋದಿ ಸರ್ಕಾರವನ್ನು ಉರುಳಿಸಲು ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನರೇಂದ್ರ ಮೋದಿಯವರ ಸಂಕಲ್ಪವನ್ನು ವಿಫಲಗೊಳಿಸಲು ಈ ಹೋರಾಟ ನಡೆಯುತ್ತಿದೆ ಎಂದು ಅಶ್ವಿನಿ ತಿಳಿಸಿದರು. ಇದರ ವಿರುದ್ಧ ಪ್ರಜಾಪ್ರಭುತ್ವವಾದಿಗಳು ಜಾಗರೂಕರಾಗಿರಬೇಕೆಂದು ಅವರು ಕರೆ ನೀಡಿದರು.
ಉಮೇಶ್ ಬೆಳ್ಳಿಪ್ಪಾಡಿ ಅಧ್ಯಕ್ಷರಾಗಿ ಬಿಜೆಪಿ ದೇಲಂಪಾಡಿ ಏರಿಯಾ ಸಮಿತಿಯನ್ನು ಪುನಾರಚಿಸಲಾಯಿತು.
ಉಮೇಶ್ ಬೆಳ್ಳಿಪ್ಪಾಡಿ ಅಧ್ಯಕ್ಷರಾಗಿ ದೇಲಂಪಾಡಿ ಏರಿಯಾ ಸಮಿತಿಯನ್ನು ಪುನಾರಚಿಸಲಾಯಿತು. ಪಿ. ಸತೀಶ್ ದೇಲಂಪಾಡಿ ಪ್ರಧಾನ ಕಾರ್ಯದರ್ಶಿಯಾಗಿ, ಎಂ. ವಸಂತ, ಮಹೇಶ್ ಭಟ್, ಪ್ರದೀಪ್ ಕುಮಾರ್, ಕೇಶವ ಕುತ್ತಿಮೂಲ ಮತ್ತು ಮುರಳೀಧರ ಕೆ. ಉಪಾಧ್ಯಕ್ಷರಾಗಿ, ಹರ್ಷಿತ್ ಬಿ.ಎಚ್., ಸುರೇಂದ್ರ ಪಿ., ಎ. ರಂಜಿನಿ, ಕೆ. ಶೀಲಾವತಿ ಮತ್ತು ಬಿ. ರವಿಕುಮಾರ್ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಉಮೇಶ್ ಬೆಳ್ಳಿಪ್ಪಾಡಿ ವಹಿಸಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್, ಮುಳಿಯಾರು ಮಂಡಲ ಪ್ರಭಾರಿ ಹಾಗೂ ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಮುಳಿಯಾರು ಮಂಡಲ ಅಧ್ಯಕ್ಷ ದಿಲೀಪ್ ಪಳ್ಳಂಜಿ, ಮಂಡಲ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಾನಡ್ಕ, ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ ಬೆಳ್ಳಿಪ್ಪಾಡಿ, ಆಡೂರು ಏರಿಯಾ ಅಧ್ಯಕ್ಷ ರಾಜೇಶ್ ಪಾಂಡಿ, ಬೆಳ್ಳಿಪ್ಪಾಡಿ ವಾರ್ಡ್ ಜನಪ್ರತಿನಿಧಿ ಧನಂಜಯ ಬಿ., ವಿಕ್ರಾಂತ್ ಬಿ.ಎಂ. ಮತ್ತು ಬ್ರೀಸ್ ಮಾತನಾಡಿದರು.




