ಬೆಂಗಳೂರು, ಡಿ.25: ಇಂದು ಬೆಂಗಳೂರು (Bengaluru air quality) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ಹೇಳಲಾಗಿದೆ. ಮುಂದಿನ 7 ದಿನ ಚಳಿ ಮತ್ತು ಮಂಜು ವಾತಾವರಣ ಇರುವ ಕಾರಣ, ಗಾಳಿಯ ಗುಣಮಟ್ಟದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುವ ಸಾಧ್ಯತೆಗಳು ಇದೆ. ಬೆಂಗಳೂರಿನ ಗಾಳಿಯ ಗುಣಮಟ್ಟ ಅನಾರೋಗ್ಯಕರವಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಕಾರ, ಇಂದು ಗಾಳಿಯ ಗುಣಮಟ್ಟದಲ್ಲಿ ಕೆಟ್ಟ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ. ನಗರದ ಸರಾಸರಿ AQI 184 (ಅನಾರೋಗ್ಯಕರ) ಮತ್ತು 221 (ತುಂಬಾ ಅನಾರೋಗ್ಯಕರ/ತೀವ್ರ) ನಡುವೆ ವರದಿಯಾಗಿದೆ . ಇನ್ನು PM2.5 ಮತ್ತು PM10 . PM2.5 ಮಟ್ಟಗಳು 96 µg/m³ ವರೆಗೆ ದಾಖಲಾಗಿದೆ. PM10 ಮಟ್ಟಗಳು ಸುಮಾರು 132 µg/m³ ರಷ್ಟಿವೆ .
ಇನ್ನು ಈ ಗಾಳಿಯ ಗುಣಮಟ್ಟದಲ್ಲಿ ವಾತಾವರಣಕ್ಕೆ ಅನುಗುಣವಾಗಿ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನ ಭೋಗನಹಳ್ಳಿಯಲ್ಲಿ ಗಾಳಿಗುಣ ಮಟ್ಟ 225 ಇದೆ. ಇನ್ನು ಪಾಮ್ ಮೆಡೋಸ್ನಲ್ಲಿ 202, ಮತ್ತು ಬೆಳತ್ತೂರುನಲ್ಲಿ 204, ಅರೆಕೆರೆಯಲ್ಲಿ 194, ಕೃಷ್ಣರಾಜಪುರದಲ್ಲಿ 19 ಹಾಗೂ ಬೊಮ್ಮನಹಳ್ಳಿಯಲ್ಲಿ 187 ಗಾಳಿಯಮಟ್ಟ ಇದೆ. ಪ್ರಸ್ತುತ ಬೆಂಗಳೂರಿನ ಗಾಳಿಯ ಗುಣಮಟ್ಟದ ಸ್ಥಿತಿ ಕೆಟ್ಟಾಗಿದ್ದು, ಆರೋಗ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ.
ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆಗಳಿರುವ ಜನರು ಹೊರಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯವಂತ ವ್ಯಕ್ತಿಗಳು ಗಂಟಲಿನಲ್ಲಿ ಕಿರಿಕಿರಿ ಅಥವಾ ಉಸಿರಾಟದ ತೊಂದರೆ ಅನುಭವಿಸಬಹುದು. ಹೆಚ್ಚಿನ ಸಂಚಾರ ಅಥವಾ ಹೆಚ್ಚಿನ ಮಾಲಿನ್ಯ ಪ್ರದೇಶಗಳಲ್ಲಿ ಹೋಗುವ ಮುನ್ನ N95 ಮಾಸ್ಕ್ ಬಳಸಿ ಎಂದು ಹೇಳಲಾಗಿದೆ.





