ಮಂಜೇಶ್ವರ: ವಿವಿಧ ರೈಲು ನಿಲ್ದಾಣ, ರೈಲ್ವೇ ಗೇಟ್ ಅಭಿವೃದ್ದಿ ನಡೆಸಲಾಗುತ್ತಿದ್ದು ಇದರಂತೆ ಹೊಸಂಗಡಿ ರೈಲ್ವೇ ಗೇಟ್ ಹಳಿ ರಸ್ತೆಯನ್ನು ಕೂಡಾ ಅಭಿವೃದ್ದಿಗೆ ಸಿದ್ದತೆ ನಡೆಸುತ್ತಿದ್ದಾರೆ.
ಈಗಾಗಲೇ ಮಂಜೇಶ್ವರ ರೈಲ್ವೇ ನಿಲ್ದಾಣ ಅಭಿವೃದ್ದಿ ಕೆಲಸಗಳು ನಡೇಯುತ್ತಿದೆ. ಉಪ್ಪಳ ರೈಲ್ವೇಗೇಟ್‌ನಲ್ಲಿ ರಸ್ತೆಗೆ ಇಂಟರ್‌ಲಾಕ್ ಅಳವಡಿಸಲಾಗಿದೆ. ಇದೀಗ ಬಂಗ್ರಮಂಜೇಶ್ವರ ರಸ್ತೆ ಪ್ರವೇಶಿಸುವ ಹೊಸಂಗಡಿ ರೈಲ್ವೇ ಗೇಟ್ನಲ್ಲಿ ರಸ್ತೆಗೆ ಇಂಟರ್‌ಲಾಕ್ ಅಳವಡಿಸಲು ರೈಲ್ವೇ ಇಲಾಖೆ ಸಿದ್ದತೆ ನಡೇಸುತ್ತಿದ್ದಾರೆ.
ಇದರಂತೆ ಈಗಾಗಲೇ ಇಂಟರ್‌ಲಾಕ್‌ನ್ನು ತಲುಪಿದೆ. ಇನ್ನು ವಿವಿಧ ಸಾಮಾಗ್ರಿಗಳು ತಲುಪಿದ ಬಳಿಕ ಕಾಮಗಾರಿ ಆರಂಭಿಸಲಾಗುವುದೆಂದು ಉದ್ಯೋಗಸ್ಥರು ತಿಳಿಸಿದ್ದಾರೆ. ಕಾಮಗಾರಿ ಪೂರ್ತಿಗೊಂಡರೆ ಸಂಚಾರ ಸುಗಮಗೊಳ್ಳಲಿದೆ. ಕಾಮಗಾರಿ ವೇಳೆ ಇಲ್ಲಿನ ರೈಲ್ವೇ ಗೇಟ್ ಮುಚ್ಚುವ ಸಾಧ್ಯತೆ ಇದ್ದು, ಇದರಿಂದ ಬಂಗ್ರಮಂಜೇಶ್ವರ ಸಹಿತ ವಿವಿಧ ಪ್ರದೇಶಕ್ಕೆ ಸಂಚಾರ ಮೊಟಕುಗೊಳ್ಳಲಿದ್ದು, ಮಂಜೇಶ್ವರ ಹತ್ತನೇ ಮೈಲು ರಸ್ತೆಯಿಂದ ಸುತ್ತುವರಿದು ಸಂಚಾರ ನಡೆಸಬೇಕಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.